BEO, ಸೂಪರಿಡೆಂಟ್ ಎಸಿಬಿ ಬಲೆಗೆ: ವಿಕಲ ಚೇತನ ಶಿಕ್ಷಕನಿಂದ ಲಂಚದ ಬೇಡಿಕೆ….
1 min readಮೈಸೂರು: ನಿವೃತ್ತಿ ಹೊಂದಿದ ಶಿಕ್ಷಕರ ಸೇವಾವಧಿ ಸವಲತ್ತು ನೀಡಲು ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಬಿಇಓ, ಸೂಪರಿಡೆಂಟ್ ಹಾಗೂ ದ್ವಿತೀಯ ದರ್ಜೆ ಸಹಾಯಕನ ಮೇಲೆ ಎಸಿಬಿ ತಂಡ ದಾಳಿ ಮಾಡಿ, ಮೂವರನ್ನ ವಶಕ್ಕೆ ಪಡೆಯಲಾಗಿದೆ.
ಎಚ್.ಡಿ.ಕೋಟೆ ಬಿಇಒ ಕಚೇರಿ ಮೇಲೆ ಎಸಿಬಿ ತಂಡದ ದಾಳಿ
ಬಿಇಒ ಚಂದ್ರಕಾಂತ್, ಸೂಪರಿಡೆಂಟ್ ಶಂಕರ್ ಎಸಿಬಿ ಅಧಿಕಾರಿಗಳ ವಶಕ್ಕೆ.
ದ್ವಿತೀಯ ದರ್ಜೆ ಸಹಾಯಕ ರವಿ ಸೇರಿದಂತೆ ಮೂವರ ವಿರುದ್ದ ತನಿಖೆ ಆರಂಭ.
ಸಂಜೆ 5 ಗಂಟೆಯಿಂದ ದಾಳಿ ನಡೆಸಿ ವಿಚಾರಣೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು.
ನಿವೃತ್ತ ವಿಕಲ ಚೇತನ ಶಿಕ್ಷಕರೊಬ್ಬ
ರಿಂದ 9ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು.
ಶಿಕ್ಷಕನ ಫೆನ್ಷನ್ ಸೇರಿದಂತೆ ಸೇವಾ ಅವಧಿಯ ಸವಲತ್ತು ಪಡೆಯುವ ದಾಖಲಾತಿ ಹಿರಿಯ ಅಧಿಕಾರಿಗಳಿಗೆ ಕಳಿಸಲು ಹಣದ ಬೇಡಿಕೆ.
7 ಸಾವಿರ ಲಂಚದ ಹಣ ನೀಡಿದಾಗ ಎಸಿಬಿಗೆ ಸಿಕ್ಕಿಬಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು.
ಎಸಿಬಿ ಜಿಲ್ಲಾ ಪೊಲೀಸ್ ಅಧಿಕಾರಿ ಸಜೀತ್ ಮಾರ್ಗದರ್ಶನದಲ್ಲಿ ಡಿವೈ ಎಸ್ ಪಿ ತಮ್ಮಯ್ಯ ನೇತೃತ್ವದ ತಂಡದಿಂದ ನಡೆದ ದಾಳಿ.