Posts Slider

Karnataka Voice

Latest Kannada News

‘ಬೆನ್ನಿ’ಯಾಗಿ ನಂದಿತಾ ಶ್ವೇತಾ- ಫಸ್ಟ್‌ಲುಕ್‌ಗೆ ದನಿಯಾದ ಸುದೀಪ್‌…

Spread the love

‘ನಂದಾ ಲವ್ಸ್‌ ನಂದಿತಾ’ ಖ್ಯಾತಿಯ ನಟಿ ನಂದಿತಾ ಶ್ವೇತಾ ‘ಬೆನ್ನಿ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ರಾಮೇನಹಳ್ಳಿ ಜಗನ್ನಾಥ್‌ ನಿರ್ಮಾಣದ ಈ ಚಿತ್ರವನ್ನು ಶ್ರೀಲೇಶ್‌ ನಾಯರ್‌ ನಿರ್ದೇಶಿಸಲಿದ್ದಾರೆ.

‘ನಂದಾ ಲವ್ಸ್‌ ನಂದಿತಾ’ ಸಿನಿಮಾದ ‘ಜಿಂಕೆ ಮರೀನಾ…’ ಹಾಡನ್ನು ಸಿನಿಪ್ರಿಯರು ಮರೆತಿರಲಾರರು. ಈ ಹಾಡಿನಿಂದಲೇ ಜನಪ್ರಿಯರಾಗಿದ್ದ ನಂದಿತಾ ಶ್ವೇತಾ ತೆಲುಗು, ತಮಿಳು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅವರು ‘ಬೆನ್ನಿ’ ಚಿತ್ರದೊಂದಿಗೆ ಕನ್ನಡಕ್ಕೆ ಮರಳುತ್ತಿದ್ದಾರೆ. ಇದೊಂದು ಸ್ತ್ರೀಪ್ರಧಾನ ಚಿತ್ರವಾಗಿದ್ದು, ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ನಂದಿತಾ ಶ್ವೇತಾ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಂದೆ – ಮಗಳ ಬದುಕಿನಲ್ಲಿ ಎದುರಾಗುವ ಘಟನೆಗಳೇ ಚಿತ್ರದ ವಸ್ತು.

‘ಹೊಂದಿಸಿ ಬರೆಯಿರಿ’ ಸಿನಿಮಾ ನಿರ್ದೇಶಿಸಿದ್ದ ರಾಮೇನಹಳ್ಳಿ ಜಗನ್ನಾಥ್‌ ನಿರ್ಮಿಸುತ್ತಿರುವ ಚಿತ್ರವಿದು. ‘ಪೆಪೆ’ ಸಿನಿಮಾ ನಿರ್ದೇಶಕ ಶ್ರೀಲೇಶ್‌ ಎಸ್‌ ನಾಯರ್‌ ಈ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಫಸ್ಟ್‌ಲುಕ್‌ ಟೀಸರ್‌ಗೆ ನಟ ಕಿಚ್ಚ ಸುದೀಪ್‌ ಬಾಯ್ಸ್‌ ಕೊಟ್ಟಿದ್ದಾರೆ. ದಕ್ಷಿಣದ ಭಾರತದ ಪ್ರಮುಖ ನಟರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಮೂಡಿಬರಲಿದೆ. ಸಚಿನ್‌ ಬಸ್ರೂರ್‌ ಸಂಗೀತ, ಗುರುಪ್ರಸಾದ್ ನಾರ್ನಾಡ್‌ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಚಿತ್ರಕ್ಕಿರಲಿದೆ.


Spread the love

Leave a Reply

Your email address will not be published. Required fields are marked *