ಗುಡ್ಡದಹುಲಿಕಟ್ಟಿಯಲ್ಲಿ ಅವಘಡ: ಎಲ್ಲರೂ ಅರಾಮಾಗಿ ಮಲಗಿದಾಗ ಅವು ನರಳಿ ನರಳಿ ಸತ್ತವು

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಗುಡ್ಡದಹುಲಿಕಟ್ಟಿಯಲ್ಲಿ ಅವಘಡವೊಂದು ನಡೆದಿದ್ದು, ಎರಡು ಆಕಳುಗಳು ಬೆಂಕಿಯಲ್ಲಿ ಬೆಂದು ಪ್ರಾಣವನ್ನ ಕಳೆದುಕೊಂಡಿವೆ.
ನೀಲಕಂಠಗೌಡ ಪಾಟೀಲ ಎಂಬುವವರಿಗೆ ಸೇರಿದ ಬೆಲೆಬಾಳುವ ಆಕಳುಗಳೇ ಸಾವಿಗೀಡಾಗಿದ್ದು, ದನದ ಕೊಟ್ಟಿಗೆಯ ಬಳಿ ಹತ್ತಿದ ಬೆಂಕಿ, ಪೂರ್ಣವಾಗಿ ಕೊಟ್ಟಿಗೆಯನ್ನೇ ಆವರಿಸಿದೆ. ಇದರಿಂದ ಮೂರು ಆಕಳುಗಳು ಸಾವಿಗೀಡಾಗಿವೆ.
ಬೆಂಕಿ ಆ ಪ್ರದೇಶದಲ್ಲಿ ಹೇಗೆ ಬಂತು ಎಂಬುದು ಗೊತ್ತಾಗಿಲ್ಲ. ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಿದ್ದಾರಾ ಎಂಬ ಸಂಶಯವೂ ಎದುರಾಗಿದ್ದು, ಘಟನೆಯ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಗೆ ಮಾಹಿತಿ ರವಾನೆ ಮಾಡಿದ್ದಾರೆ.
ಬೆಂಕಿ ಹತ್ತಿದಾಗ, ಆಕಳುಗಳು ತಪ್ಪಿಸಿಕೊಳ್ಳೋ ಪ್ರಯತ್ನ ಮಾಡಿವೆ. ಆದರೆ, ಅವುಗಳಿಗೆ ಕಟ್ಟಿದ ಹಗ್ಗ ಬಿಚ್ಚದೇ ಇರುವುದರಿಂದ ಒಂದರ ಮೇಲೆ ಮತ್ತೊಂದು ಬಿದ್ದು ಪ್ರಾಣವನ್ನ ಕಳೆದುಕೊಂಡಿವೆ.