ಬೇಂದ್ರೆ ಸಾರಿಗೆ ಚಾಲಕ, ನಿರ್ವಾಹಕನಿಂದ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿತ- ಮಹಾನಗರ ಪಾಲಿಕೆ ಎದುರೇ ಗೂಂಡಾಗಿರಿ
1 min readಹೊಡೆಯುತ್ತಿರೋ ವೀಡಿಯೋ ಇದೆ. ಅದನ್ನ ಹಾಕಲು ಆಗುವುದಿಲ್ಲ. ಏಕೆಂದರೇ, ಅದರಲ್ಲಿನ ಶಬ್ದಗಳು ಸಾಕಷ್ಟು ಅಶ್ಲೀಲವಾಗಿವೆ.
ಧಾರವಾಡ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುತ್ತಿದ್ದ ಸಮಯದಲ್ಲಿ ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ಟ ಎಂಬ ಕಾರಣಕ್ಕೆ ಪ್ರಯಾಣಿಕನನ್ನ ಬೇಂದ್ರೆ ಸಾರಿಗೆಯ ನಿರ್ವಾಹಕ ಹಾಗೂ ಚಾಲಕ ಕೂಡಿಕೊಂಡು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರೇ ನಡೆದಿದೆ.
ಸಂಗಮೇಶ ಎಂಬ ಪ್ರಯಾಣಿಕ ನಗರದ ಸಮೀಪ ಬರುವಾಗ ಮೂರು ಮಕ್ಕಳ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದ ಎಂಬ ಕಾರಣಕ್ಕೆ ಬೇಂದ್ರೆ ಸಾರಿಗೆ ಚಾಲಕ, ನಿರ್ವಾಹಕ ಗೂಂಡಾಗಳಂತೆ ನಡೆದುಕೊಂಡಿದ್ದು, ಸಾರ್ವಜನಿಕರು ನೋಡಿಕೊಂಡು ನಿಲ್ಲುವಂತಾಗಿತ್ತು.
ಪ್ರಯಾಣಿಕ ತಪ್ಪು ಮಾಡಿದ್ದರೇ, ಆತನನ್ನ ಪೊಲೀಸ್ ಠಾಣೆಗೆ ಒಪ್ಪಿಸಬಹುದಾಗಿತ್ತು. ಆದರೆ, ಸಿಬ್ಬಂದಿಗಳೇ ಕಾನೂನನ್ನ ಕೈಯಲ್ಲಿ ತೆಗೆದುಕೊಂಡು ರಕ್ತ ಬರುವಂತೆ ಹೊಡೆಯುತ್ತಿದ್ದರು. ಮಹಾನಗರ ಪಾಲಿಕೆಯ ಮುಂದೆ ಯಾವುದೇ ಭಯವಿಲ್ಲದೇ, ಗೂಂಡಾಗಿರಿ ಪ್ರದರ್ಶನ ಮಾಡಿದ್ರು.
ಪ್ರತಿಸಲ ಹೊಡೆತ ತಿಂದಾಗಲೂ ಪ್ರಯಾಣಿಕ ನಾನೇನು ತಪ್ಪು ಮಾಡಿಲ್ಲ ಎಂದು ಹೇಳುತ್ತಲೇ ಅಶ್ಲೀಲವಾಗಿ ಬೈಯುತ್ತಿದ್ದ. ಇದರಿಂದ ಚಾಲಕ, ನಿರ್ವಾಹಕ ಮತ್ತಷ್ಟು ರೋಸಿ ಹೋಗಿ ಹೊಡೆದು ಕಳಿಸಿದ್ದು, ಬೇಂದ್ರೇ ಸಾರಿಗೆಯ ವ್ಯವಸ್ಥೆಯನ್ನ ತೋರಿಸುವಂತಿತ್ತು.