ಬೆಂಡಿಗೇರಿ ಠಾಣೆಯಲ್ಲೂ ರೌಡಿ ಷೀಟರುಗಳಿಗೆ ಕ್ಲಾಸ್: ಆವಾಜ್ ಬಂದ್ರೇ ಅಷ್ಟೇ… !
ಹುಬ್ಬಳ್ಳಿ: ನಗರದಲ್ಲಿ ರೌಡಿ ಷೀಟರಗಳ ಹಾವಳಿಗೆ ಕಡಿವಾಣ ಹಾಕುವ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಷೀಟರುಗಳಿಗೆ ಇನ್ಸಪೆಕ್ಟರ್ ಕ್ಲಾಸ್ ತೆಗೆದುಕೊಂಡಿದ್ದು, ಏನೇ ಗಲಾಟೆ ನಡೆದರೂ ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸೆಟ್ಲಮೆಂಟ್ ಪ್ರದೇಶವೂ ಸೇರಿದಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಷೀಟರುಗಳನ್ನ ಠಾಣೆಗೆ ಕರೆಸಿದ ಪೊಲೀಸ್ ಇನ್ಸಪೆಕ್ಟರ್ ಅರುಣಕುಮಾರ ಸಾಳುಂಕೆ, ಯಾವುದೇ ಕ್ರಿಮಿನಲ್ ಅಪರಾಧದ ಪ್ರಯತ್ನ ಮಾಡಿದರೂ ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ರು.
ಠಾಣೆಯಲ್ಲಿ ಏನೂ ಅರಿಯದವರಂತೆ ನಿಂತಿದ್ದ ಒಬ್ಬೋಬ್ಬ ರೌಡಿ ಷೀಟರುಗಳನ್ನೂ ವಯಕ್ತಿಕವಾಗಿ ವಿಚಾರಣೆ ಮಾಡಿ, ಯಾವ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದನ್ನ ತಿಳಿದುಕೊಂಡ ಇನ್ಸಪೆಕ್ಟರ್ ಸಾಳುಂಕೆ, ಸಾರ್ವಜನಿಕರ ಜೀವನಕ್ಕೆ ತೊಂದರೆಯಾದರೇ, ಇಲಾಖೆ ಸುಮ್ಮನೆ ಕೂಡಲ್ಲ ಎಂದರು.
ತಾವೂ ವಾಸಿಸುವ ಪ್ರದೇಶಗಳಲ್ಲಿ ಏನೇ ಅಹಿತಕರ ಘಟನೆಗಳು ನಡೆದರೇ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಹಾಗಾಗಿ ಬಹಳಷ್ಟು ಎಚ್ಚರಿಕೆಯಿಂದ ಇರುವಂತೆ ತಾಕೀತು ಮಾಡಿ, ಮುಚ್ಚಳಿಕೆ ಬರೆಸಿಕೊಂಡು ಕಳಿಸಲಾಗಿದೆ.