ಹುಬ್ಬಳ್ಳಿಯಲ್ಲಿ ‘ಕಲ್ಯಾಣಿ’ ಬಂಧನ: ರೂಪಾಯಿಗೆ 90 ರೂಪಾಯಿ
1 min readಹುಬ್ಬಳ್ಳಿ: ಮಂಟೂರ ರೋಡ ಗೋಲ್ಡನ್ ಜುಬಲಿ ಚರ್ಚ್ ಹತ್ತಿರ ಕಲ್ಯಾಣಿ ಮಟಕಾ ಆಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಮಂಟೂರ ರಸ್ತೆ ಕೃಪಾನಗರದ ಮುಸ್ತಾಕಅಹ್ಮದ ಅಕ್ಬರಅಲಿ ತಡಸ ಹಾಗೂ ಅಂಬೇಡ್ಕರ ಕಾಲನಿಯ ಇಮ್ತಿಯಾಜಅಹಮ್ಮದ ಅಲ್ಲಾಭಕ್ಷ ಮಕಾಂದಾರ ಎಂದು ಗುರುತಿಸಲಾಗಿದ್ದು, 1900 ರೂಪಾಯಿ ಹಾಗೂ 14 ಓಸಿ ಜೂಜಾಟದ ಅಂಕಿ ಸಂಖ್ಯೆಯುಳ್ಳ 14 ಚೀಟಿಗಳು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯಲ್ಲಿ ದಿನಕ್ಕೊಂದು ದಂಧೆಯನ್ನ ಪೊಲೀಸರು ಬಯಲು ಮಾಡುತ್ತಿದ್ದು, ಇವುಗಳನ್ನ ಬೇರು ಮಟ್ಟದಿಂದ ತೆಗೆಯುವ ಅವಶ್ಯಕತೆಯಿದ್ದು, ಅದನ್ನ ಮಾಡಲು ಪೊಲೀಸರು ಮುಂದಾಗಬೇಕಿದೆ.
ಈಗಾಗಲೇ ಪೊಲೀಸರು ಗಾಂಜಾ, ಮಟಕಾ ಮತ್ತು ಸ್ಪೀರಿಟ್ ಪ್ರಕರಣಗಳು ಪತ್ತೆಯಾಗಿವೆ.
ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಅರುಣಕುಮಾರ್ ಸಾಳುಂಕೆ ಮತ್ತು ಸಿಬ್ಬಂದಿಗಳಾದ ಜಿ.ಸಿ.ರಜಪೂತ, ಎಂ.ಡಿ. ರಾಠೋಡ, ವಿ.ಆರ್ ಸುರವೆ ದಾಳಿ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.