ಕಲಘಟಗಿ: ಹೊತ್ತಿ ಉರಿಯುತ್ತಿದೆ 80 ಎಕರೆ ಕಬ್ಬು… ಹೆಚ್ಚುತ್ತಿದೆ ಬೆಂಕಿಯ ಕೆನ್ನಾಲಿಗೆ…!

ಕಲಘಟಗಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 80 ಎಕರೆ ಕಬ್ಬಿಗೆ ಬೆಂಕಿ ತಗುಲಿರುವ ಘಟನೆ ತಾಲೂಕಿನ ಬೆಲವಂತರ ಗ್ರಾಮದ ಹೊರವಲಯದಲ್ಲಿ ನಡೆದಿದ್ದು, ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹೆಚ್ಚಾಗುತ್ತಿದೆ.
ಬೈಲಪ ಬೇಗೂರ, ಮಲ್ಲಿಕಾರ್ಜುನ ಹಿರೇಮಠ, ನಾಗಯ್ಯ ಕೋಟಿ, ಗಂಗಾದರಯ್ಯ ಹಿರೇಮಠ, ಮಾದೇವಪ್ಪ ನೂಲ್ವಿ, ಮಾದೇವಪ್ಪ ಬಂದನ್ನವರ, ಮಾದೇವಪ್ಪ ನಾ ಬಸನಕೊಪ್ಪ, ರಾಮಪ್ಪ ಮುತ್ತಗಿ, ಮುತ್ತುರಾಜ ಬೇಗೂರ, ದೊಡ್ಡೇಶಪ್ಪ ಬೇಗೂರ, ಮಾಂತೇಶ ಬೇಗೂರ ಅವರುಗಳಿಗೆ ಸೇರಿದ ಕಬ್ಬಿಗೆ ಬೆಂಕಿ ತಗುಲಿದೆ.
ಬೆಂಕಿ ತಗುಲಿದ ವಿಷಯವನ್ನ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದರೂ, ಸ್ಥಳಕ್ಕೆ ಇನ್ನೂ ಆಗಮಿಸದೇ ಇರುವುದರಿಂದ ಬೆಂಕಿಯು ಮತ್ತಷ್ಟು ಹೆಚ್ಚಾಗುತ್ತಿದೆ. ಲಕ್ಷಾಂತರ ರೂಪಾಯಿಯ ಕಬ್ಬು ಕಳೆದುಕೊಂಡ ರೈತ ಕಂಗಾಲಾಗಿದ್ದು, ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಪರಿಹಾರವನ್ನ ಕೊಡಲು ಮುಂದಾಗಬೇಕಿದೆ.