ವಲಸೆ ಕಾರ್ಮಿಕರಿಗೆ ತವರೂರಿಗೆ ಕಳಿಸಲು ರೈಲು ವ್ಯವಸ್ಥೆ ಮಾಡಿದ ಬಳ್ಳಾರಿ ಜಿಲ್ಲಾಡಳಿತ

ಬಳ್ಳಾರಿ: ವಲಸೆ ಕಾರ್ಮಿಕರನ್ನ ಅವರವರ ರಾಜ್ಯಕ್ಕೆ ಕಳುಹಿಸಲು ರೈಲು ವ್ಯವಸ್ಥೆ ಮಾಡಲಾಗುತ್ತಿದ್ದು, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡಗಳಿಗೆ ತೆರೆಳಲು ಸಿದ್ಧರಾಗಿರೋ ಕಾರ್ಮಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ.
ಬಳ್ಳಾರಿಯ KSRTCಯಲ್ಲಿ ಇಂದು ವಲಸೆ ಕಾರ್ಮಿಕರಿಗೆ ಹೆಲ್ತ್ ಚೆಕಪ್ ಮಾಡಿ, ನಂತ್ರ ಅವರವರ ರಾಜ್ಯಕ್ಕೆ ತೆರಳಲು ಅನುಮತಿ ನೀಡಲಾಗುತ್ತಿದೆ. 11300 ಜನ ಈಗಾಗಲೆ ಸೇವಾಸಿಂಧುವಿನಲ್ಲಿ ಪಾಸ್ ತೆಗೆದುಕೊಂಡಿದ್ದಾರೆ. 17 ಮತ್ತು 18 ನೇ ತಾರೀಖಿನಂದು ಬಳ್ಳಾರಿ ಜಿಲ್ಲೆ ಹೊಸಪೇಟೆಯಿಂದ ಹೊರಡಲು ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೇನ್ ನಲ್ಲಿರೋ ಕೂಲಿ ಕಾರ್ಮಿಕರನ್ನ ರೈಲ್ವೇ ನಿಲ್ದಾಣಕ್ಕೆ ಕರೆತರಲು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ SS ನಕುಲ್ ಹೇಳಿದ್ದಾರೆ.