ಪಾದರಾಯಪುರದವರು ರಾಮನಗರಕ್ಕೆ ಹೋದ್ರೇ ಗಲಾಟೆ: ಕೆಜೆ-ಡಿಜೆ ಹಳ್ಳಿಯಿಂದ ಬಳ್ಳಾರಿಗೆ ಬಂದ್ರೇ.. ! ನಡೀಯತ್ತಾ..?
1 min readಬಳ್ಳಾರಿ: ಕೊರೋನಾ ವೈರಸ್ ಇನ್ನೂ ಮೊದಲ ಹಂತದಲ್ಲಿದ್ದಾಗಲೇ ಬೆಂಗಳೂರಿನ ಪಾದರಾಯಪುರದಲ್ಲಿ ಗಲಾಟೆ ನಡೆದಿತ್ತು. ಆಗ ಅಲ್ಲಿನ ಆರೋಪಿಗಳನ್ನ ರಾಮನಗರ ಜೈಲಿಗೆ ಶಿಪ್ಟ್ ಮಾಡಿದಾಗ ಸ್ವತಃ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿ ಕಾರಿದ್ದರು. ಆದರೀಗ, ಅದೇ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಗಲಾಟೆ ಮಾಡಿದ ಸುಮಾರು 80ಆರೋಪಿಗಳನ್ನ ಬಳ್ಳಾರಿ ಜೈಲಿಗೆ ಕರೆತರಲಾಗಿದೆ. ಹೀಗಾದ್ರೇ ನಡೆಯತ್ತಾ..?
ಉತ್ತರ ಕರ್ನಾಟಕದ ಮೇಲೆ ಏನೇ ಮಾಡಿದರೂ ನಡೆಯತ್ತೆ ಎಂಬ ಮನೋಭಾವ ಬೆಂಗಳೂರಿನ ಜನರಲ್ಲಿರುವುದರಿಂದಲೇ ಪ್ರತಿದಿನ ಸಾವಿರಾರೂ ಕೊರೋನಾ ಪಾಸಿಟಿವ್ ಪ್ರಕರಣಗಳು ಬರುವ ಬೆಂಗಳೂರಿಂದ ಇಲ್ಲಿಗೆ ಆರೋಪಿಗಳನ್ನ ಕರೆತರಲಾಗಿದೆ. ಇಲ್ಲಿ ಕೇಳುವವರೂ ಇಲ್ಲವೇ ಇಲ್ಲ ಎನ್ನುವ ಸ್ಥಿತಿ ಅಲ್ಲಿನವರೆಗೆ ಚೆನ್ನಾಗಿಯೇ ಗೊತ್ತಿದೆ.
ಮೂರು ಬಸ್ ಗಳಲ್ಲಿ ಬೆಂಗಳೂರಿಂದ ಬಂದ ಆರೋಪಿಗಳನ್ನ ತಪಾಸಣೆ ಮಾಡಿ, ಕಾರಾಗೃಹದೊಳಗೆ ಕಳಿಸಲಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಪ್ರತಿದಿನ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಈಗ ಮತ್ತೆ ಬೆಂಗಳೂರಿಂದ ಬಂದ ಆರೋಪಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ತಲೆ ನೋವಾಗುವ ಸಾಧ್ಯತೆಯಿದೆ.
ಬಂಧಿತ ಎಲ್ಲರ ಕೊರೋನಾ ಟೆಸ್ಟ್ ಮಾಡಿಸುವ ಸಾಧ್ಯೆತೆಯಿದೆ. ಈ ಮೂಲಕ ಸಧ್ಯ ಜೈಲ್ಲಲ್ಲಿರುವ ಖೈದಿಗಳು ಮತ್ತು ಸಿಬ್ಬಂದಿಗಳ ಸ್ಥಿತಿ ಏನಾಗತ್ತೋ ಏನೋ..