ಬಳ್ಳಾಯರಿಯಲ್ಲಿಂದು ದಾಖಲೆಯ 216 ಪಾಸಿಟಿವ್ ಪ್ರಕರಣ: 2 ಸಾವು
ಬಳ್ಳಾರಿ: ಜಿಲ್ಲೆಯಲ್ಲಿ ಇಂದು ದಾಖಲೆಯ 216 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಕೊರೋನಾದಿಂದ ಸಾವಿಗೀಡಾಗಿರುವ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಮಾಹಿತಿ ನೀಡಿದ್ದಾರೆ.
ಇಂದಿನ 216 ಪಾಸಿಟಿವ್ ಹಿಡಿದು ಒಟ್ಟು ಜಿಲ್ಲೆಯಲ್ಲಿ 2668 ಪಾಸಿಟಿವ್ ಪ್ರಕರಣಗಳಾದಂತಾಗಿವೆ. ಒಟ್ಟು ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆ 62ಕ್ಕೇರಿದೆ. ಇಲ್ಲಿಯವರೆಗೆ 1376 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.