ಆಂಧ್ರದ ಗಡಿ ಜಿಲ್ಲೆಯ ಮದ್ಯ ಪ್ರೀಯರಿಗೆ ಶಾಕ್: ಜಿಲ್ಲಾಡಳಿತದಿಂದ ಆದೇಶ

ಬಳ್ಳಾರಿ: ಗಡಿಭಾಗದ ಮದ್ಯದಂಗಡಿಗಳು ಬಂದ್ ಮಾಡಲು ಬಳ್ಳಾರಿ ಜಿಲ್ಲಾಡಳಿತ ಮುಂದಾಗಿದ್ದು, ಆಂಧ್ರಪ್ರದೇಶದ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳಲ್ಲಿ ಹೆಚ್ಚು ಕೊರೋನಾ ಕೇಸ್ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಆಂಧ್ರ ಪ್ರದೇಶದಲ್ಲಿ ಮದ್ಯದ ಮೇಲೆ ಹೆಚ್ಚು ತೆರಿಗೆ ಇರೋ ಕಾರಣ. ಆಂಧ್ರಪ್ರದೇಶದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಯ ಮದ್ಯಪ್ರೀಯರಿಂದ ಕರ್ನಾಟಕ ಪ್ರವೇಶ. ಬಳ್ಳಾರಿ ಜಿಲ್ಲೆಯ ಗಡಿಭಾಗದ ಮದ್ಯದ ಅಂಗಡಿಗಳಿಗೆ ಲಗ್ಗೆ ಇಡ್ತಿದ್ದ ಆಂದ್ರ ಮದ್ಯ ಪ್ರಿಯರು. ಅಡ್ಡ ದಾರಿ ಹಿಡಿದು ಬರ್ತಿದ್ರು. ಈ ಕಾರಣಕ್ಕೆ ನಿನ್ನೆ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ನಾಗೇಂದ್ರ ಇಬ್ಬರ ನಡುವೆ ಜಟಾಪಟಿ ಕೂಡ ನಡೆದಿತ್ತು. ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಬಳ್ಳಾರಿ ಡಿಸಿ ಆದೇಶ ಹೊರಡಿಸಿದ್ದಾರೆ. ಗಡಿಯಂಚಿನ 5 ಕಿಲೋಮೀಟರ್ ವ್ಯಾಪ್ತಿಯ ಎಲ್ಲ ಮದ್ಯದಂಡಿಗಳ ಬಂದ್ ಗೆ ಆದೇಶ. ಬಳ್ಳಾರಿ ಡಿಸಿ ಎಸ್. ಎಸ್. ನಕುಲ್ ಅಧಿಕೃತ ಆದೇಶ.