ಗ್ರಾಮದ ಕಾಯಕ ಯೋಗಿಗಳಿಗೆ “ಗ್ರಾಮ ರತ್ನ” ಪ್ರಶಸ್ತಿ ಪ್ರದಾನ…!


ಹುಬ್ಬಳ್ಳಿ: ತಾಲೂಕಿನ ಬೆಳಗಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು , ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಹಾಗೂ ವಾಟರ್ ಮ್ಯಾನ್ , ಪಶು ವೈದ್ಯರು ಹಾಗೂ ನಾಟಿ ವೈದ್ಯರಿಗೆ ಯಂಗ್ ಸ್ಟಾರ್ ಕ್ರಿಕೆಟ್ ಟೀಮ್ ತಂಡದ ಸದಸ್ಯರು ಹಾಗೂ ಬೆಳಗಲಿ ಗ್ರಾಮಸ್ಥರು ಸನ್ಮಾನಿಸಿ ಗ್ರಾಮ ರತ್ನ ಎನ್ನುವ ಬಿರುದು ನೀಡಿ ಗೌರವಿಸಿದರು.

ಹಾಪ್ ಪಿಚ್ ಟೂರ್ನಾಮೆಂಟ್ ಪ್ರಯುಕ್ತ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿಯ ಆನಂದ ನಗರದ ಜಂಗ್ಲಿ ಕ್ರಿಕೆಟ್ ಕ್ಲಬ್ ತಂಡ ಪ್ರಥಮ ಸ್ಥಾನ ಗಳಿಸಿತು, ಆತಿಥ್ಯ ವಹಿಸಿದ್ದ ಬೆಳಗಲಿ ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಪ್ಪ ಸೊಟ್ಟಮ್ಮನವರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬಸವರಾಜ್ ನೇರ್ತಿ, ಅತಿಥಿಗಳಾಗಿ ಹನಮಂತಪ್ಪ ಸೊಟ್ಟಮ್ಮನವರ, ಹನಮಂತ ಖಂಡಣ್ಣವರ ವಹಿಸಿಕೊಂಡಿದ್ದರು. ನಿರೂಪಣೆಯನ್ನು ಷರೀಫ್ ಚಿಗಳ್ಳಿ ನಡೆಸಿಕೊಟ್ಟರು.