ನಾನು ಸುಳ್ಳು ಹೇಳೋ ಮಂತ್ರಿಯಲ್ಲ: ಬಿ.ಸಿ.ಪಾಟೀಲ
1 min readಹುಬ್ಬಳ್ಳಿ: ರೈತರ ಸಮಸ್ಯೆಗಳನ್ನ ಕೇಳಿ ಸಲಹೆ ಸೂಚನೆಗಳನ್ನ ಪಡೆಯುತ್ತಿರುವೆ. ಕೃಷಿ ಹೊಂಡಗಳ ನಿರ್ಮಾಣ ಯೋಜನೆ ಸ್ಥಗಿತಗೊಳಿಸಲ್ಲ. ರೈತರ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ. ರೈತರಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ರೈತರಿಗೆ ತಲುಪುವ ಕೆಲಸವಾಗಬೇಕಿದೆ. ನಾನು ಸುಳ್ಳು ಆಶ್ವಾಸನೆ ಕೊಟ್ಟು ಹೋಗುವ ಸಚಿವನಲ್ಲ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಸಚಿವ ಪಾಟೀಲ, ಕೃಷಿ ಲಾಭದಾಯಕವಲ್ಲ ಅನ್ನೋ ಹಂಗಾಗಿದೆ. ಕೃಷಿ ಲಾಭದಾಯಕವಾಗುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಬ್ಯಾಂಕ್ ನಲ್ಲಿ ರೈತರಿಗೆ ಸಾಲ ಕೊಡಲು ಕ್ರೇಡಿಟ್ ಸ್ಕೋರ್ ನೋಡಿ ಸಾಲ ಕೊಡುವ ಆರೋಪ ಕೇಳಿ ಬಂದಿದೆ. ರೈತರ ಬೆಳೆದಂತಹ ಬೆಳೆಗೆ ಸೂಕ್ತ ಬೆಲೆ ಸಿಗಬೇಕಾಗಿದೆ. ಬಜೆಟ್ ನಲ್ಲಿ ರೈತ ಪರ ಯೋಜನಗಳು ಇರಲಿದೆ. ಮಾರ್ಚ ೫ ರಂದು ಮಂಡನೆಯಾಗುವ ಬಜೆಟ್ ರೈತ ಪರ ಆಗಿರಲಿದೆ. ಎಪಿಎಂಸಿಗಳು ರೈತ ಪರವಾಗಿ ಕೆಲಸ ಮಾಡುತ್ತಿಲ್ಲವೆಂಬ ಮಾತಿದೆ. ಆನಲೈನ್ ಮಾರ್ಕೆಟ್ ಗೆ ನಮ್ಮ ಸರ್ಕಾರ ಬೆಂಬಲ ನೀಡಲಿದೆ. ರೈತ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾನೆ. ರೈತರಿಗೆ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡಲ್ಲ ಎಂದರು ಪಾಟೀಲ.
ಕೃಷಿ ಇಲಾಖೆಯಲ್ಲಿ ಶೇಕಡಾ ೫೦% ಹುದ್ದೆಗಳು ಖಾಲಿಯಾಗಿವೆ. ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನ ತುಂಬಲು ಮೊದಲ ಆದ್ಯತೆ ನೀಡುವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದಾಗ ಮಾತ್ರ ಆಡಳಿತ ನಡೆಸಲು ಅನೂಕೂಲವಾಗಲಿದೆ ಎಂಬ ಅಭಿಪ್ರಾಯವನ್ನ ಸಚಿವರು ವ್ಯಕ್ತಪಡಿಸಿದರು.
ಶಾಸಕ ಶಂಕರ ಪಾಟೀಲಮುನೇನಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.