ಸಾಮಾಜಿಕ ಹೋರಾಟಗಾರ “ಬಸವರಾಜ ಕೊರವರ” ಕೊಲೆಗೆ ಮಹಾ ಸಂಚು….!!!!

ಧಾರವಾಡ: ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಕೊಲೆಗೆ ಸಂಚು ನಡೆದಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಹೊರ ಬಂದಿದ್ದು, ಧಾರವಾಡ ಜಿಲ್ಲೆಯಲ್ಲಿ ಪೊಲೀಸರು ತೀವ್ರ ಕಟ್ಟೇಚ್ಚರ ವಹಿಸಿದ್ದಾರೆಂದು ಕರ್ನಾಟಕವಾಯ್ಸ್.ಕಾಂ ತಿಳಿದು ಬಂದಿದೆ.
ಹಲವು ಪ್ರಮುಖ ಪ್ರಕರಣಗಳನ್ನ ಹೊರಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಸವರಾಜ ಕೊರವರ ಅವರು, ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದನ್ನ ಬಹುತೇಕರು ಗುರುತಿಸಿದ್ದಾರೆ.
ಬಡವರ ಮಗನೆಂದೆ ಖ್ಯಾತಿ ಪಡೆದಿರುವ ಬಸವರಾಜ ಕೊರವರ ಅವರನ್ನ ಕೊಲೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಕುರಿತು ಬಸವರಾಜ ಕೊರವರ ಅವರಿಂದಲೂ ಮಾಹಿತಿ ಪಡೆದಿದ್ದಾರೆಂದು ಗೊತ್ತಾಗಿದೆ.
ಬಸವರಾಜ ಕೊರವರ ಅವರ ಕೊಲೆಯ ಸಂಚಿನ ನಿಖರತೆಯನ್ನ ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದಾರೆ.