ಬಡವರ ಮಕ್ಳು ಬೆಳೀಬೇಕು ಕಣ್ರೀ: ಬಸವರಾಜ ಕೊರವರ ಆತ್ಮಾಭಿಮಾನದ ಮಾತು…

ಧಾರವಾಡ: ಜನರ ಹಿತ ಕಾಪಾಡುವ ಬಡವರ ಮಕ್ಕಳನ್ನ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿ. ಆಗ ಮಾತ್ರ ಕ್ಷೇತ್ರಗಳ ಅಭಿವೃದ್ಧಿ ನಡೆಯುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಜನರಿಗೆ ಮನವಿ ಮಾಡಿಕೊಂಡಿರುವ ವೀಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ.
ತೀವ್ರ ಚರ್ಚೆಗೆ ಕಾರಣವಾಗುತ್ತಿರುವ ವೀಡಿಯೋ ಇಲ್ಲಿದೆ. ಪೂರ್ಣವಾಗಿ ನೋಡಿ, ನೊಂದವರ ಕೂಗು ಏನು ಎಂಬುದು ಅರ್ಥವಾಗತ್ತೆ.
ವಿಧಾನಸೌಧಕ್ಕೆ ಗೆಲ್ಲಿಸಿ ಬಡವರನ್ನ ಕಳಿಸಿ. ಶ್ರೀಮಂತರನ್ನ ಕೈಬಿಡಿ. ಅವರಿಂದ ಏನೂ ಆಗುವುದಿಲ್ಲ. ಪ್ರತಿಯೊಬ್ಬರಿಗೂ ಬೇಕಾಗುವ ಮತ್ತು ಪ್ರತಿ ಸಮಸ್ಯೆಯನ್ನ ಅರ್ಥ ಮಾಡಿಕೊಳ್ಳುವವರನ್ನ ಬರುವ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಹೇಳಿದಾಗ, ಗುಂಪಿಂದ ‘ಬಸವರಾಜ ಕೊರವರ ಅವರಿಗೆ ಜಯವಾಗಲಿ’ ಎಂಬ ಘೋಷಣೆ ಮೊಳಗಿತು.