‘ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ’ ನಿವಾಸಕ್ಕೆ ತೆರಳಿ ಸತ್ಕರಿಸಿದ “ಮೇಯರ್ ಅಂಚಟಗೇರಿ”…

ಧಾರವಾಡ: ಸಾಮಾಜಿಕ ಕಾರ್ಯಕರ್ತ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ನಿವಾಸಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರದ ಮಹಾಪೌರ ವೀರೇಶ ಅಂಚಟಗೇರಿ ಭೇಟಿ ನೀಡಿ ಸತ್ಕರಿಸಿದರು.

ಧಾರವಾಡದ ದೊಡ್ಡನಾಯಕನಕೊಪ್ಪದಲ್ಲಿರುವ ಬಸವರಾಜ ಕೊರವರ ಮನೆಗೆ ತೆರಳಿದ ಮೇಯರ್ ವೀರೇಶ ಅಂಚಟಗೇರಿಯವರು, ಸುಮಾರು ಹೊತ್ತಿನವರೆಗೆ ಅವಳಿನಗರದ ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡರು.

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ವಾರ್ಡಗಳ ಸ್ಥಿತಿಯ ಬಗ್ಗೆ ಬಸವರಾಜ ಕೊರವರ ಇದೇ ಸಮಯದಲ್ಲಿ ಮೇಯರ್ ಗಮನಕ್ಕೆ ತಂದರು. ಅಷ್ಟೇ ಅಲ್ಲ, ಜನರ ಸಮಸ್ಯೆ ಬಗೆಹರಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಬಸವರಾಜ ಕೊರವರ ಅವರ ಧರ್ಮಪತ್ನಿ ಸುಮಾ, ಕುಮಾರ ಅಗಸಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.