ನಾಳೆ ಗುರುನಾಥಗೌಡ- ಬಸವರಾಜ ಕೊರವರ “ಜಂಟಿ” ಪತ್ರಿಕಾಗೋಷ್ಠಿ: ತೀವ್ರ ಕುತೂಹಲ…!!!

ಧಾರವಾಡ: ಬಹುದಿನಗಳ ನಂತರ ಜನಜಾಗೃತಿ ಸಂಘದ ಬಸವರಾಜ ಕೊರವರ ಹಾಗೂ ಬಿಜೆಪಿ ಮುಖಂಡ ಗುರುನಾಥಗೌಡ ಅವರು ನಾಳೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಧಾರವಾಡ-71 ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಸವರಾಜ ಕೊರವರ ಅವರು, ಗುರುನಾಥಗೌಡ ಗೌಡರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಏನು ವಿಷಯವನ್ನ ಬಹಿರಂಗ ಮಾಡಲಿದ್ದಾರೆಂಬ ಕುತೂಹಲ ಮೂಡಿದ್ದು, ಇಡೀ ರಾಜ್ಯದಲ್ಲಿ ಮತ್ತೊಂದು ರೀತಿಯ ಸಂಚಲನ ಮೂಡುವ ಸಾಧ್ಯತೆಯಿದೆ.
ಕೆಲವು ದಿನಗಳ ಹಿಂದೆ ಹಾಲಿ ಬಿಜೆಪಿ ಶಾಸಕ ಅಮೃತ ದೇಸಾಯಿಯವರು ಸಂಕಲ್ಪ ಸಭೆಯಲ್ಲಿ “ಅಗ್ರೇಸ್ಸಿವ್” ಭಾಷಣದ ನಂತರ ಮಾಜಿ ಸಚಿವ ವಿನಯ ಕುಲಕರ್ಣಿಯವರ ಬೆಂಬಲಿಗರು ಕಿತ್ತೂರಿನಲ್ಲಿ ಬರ್ತಡೇ ಆಚರಣೆ ಮಾಡಿ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. ಇದಾದ ಎರಡೇ ದಿನದಲ್ಲಿ ಜಂಟಿ ಪತ್ರಿಕಾಗೋಷ್ಠಿಗೆ ಇಬ್ಬರು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಮತ್ತೊಂದು ಬಿರುಗಾಳಿ ಮೂಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ನಾಳೆಯವರೆಗೆ ಕಾಯಬೇಕಾಗಿದೆ.