ತಾವೇ ‘7 ಬಾರಿ’ ಸೋಲಿಸಿದ್ದ ಪಕ್ಷದಿಂದ ‘8ನೇ ಸಲ’ “ಗೆದ್ದು ಬಂದ ಹೊರಟ್ಟಿ ಮಾಸ್ತರ್”…

ಬೆಳಗಾವಿ: ಜಾತ್ಯಾತೀತ ಪಕ್ಷದಿಂದ ಏಳು ಬಾರಿ ಗೆದ್ದು ಬಂದಿದ್ದ ಬಸವರಾಜ ಹೊರಟ್ಟಿಯವರು ಎಂಟನೆಯ ಬಾರಿಗೆ ಬಿಜೆಪಿಯಿಂದ ಗೆದ್ದು ಬಂದು ವಿಶ್ವದಾಖಲೆ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿದ್ದ ಬಸವರಾಜ ಹೊರಟ್ಟಿಯವರು ಈ ಬಾರಿ 9266 ಮತಗಳನ್ನ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ 4597 ಮತಗಳನ್ನ ಪಡೆದಿದ್ದು, ಹೊರಟ್ಟಿಯವರು 4669 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನ 3109 ಅಂತರದಿಂದ ಹೊರಟ್ಟಿಯವರು ಸೋಲಿಸಿದ್ದರು. ಈ ಸಮಯದಲ್ಲಿ ಹೊರಟ್ಟಿಯವರು 7480 ಮತಗಳನ್ನ ಪಡೆದಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್ ನ ಟಿ.ಈಶ್ವರ 1352 ಪಡೆದುಕೊಂಡಿದ್ದರು.

ಏಳನೆಯ ಚುನಾವಣೆಯಲ್ಲಿ 3109 ಅಂತರವಾಗಿದ್ದರೇ, ಈ ಬಾರಿ ಕಾಂಗ್ರೆಸ್ಸಿನಿಂದ 4669 ಮತ ಹೆಚ್ಚು ಪಡೆದುಕೊಂಡಿದ್ದಾರೆ. ಬಸವರಾಜ ಹೊರಟ್ಟಿಯವರು ಬಿಜೆಪಿಗೆ ಸೇರಿದ ಪರಿಣಾಮ 1560 ಹೆಚ್ಚು ಮತಗಳು ಬಂದಿವೆ. ಕಾಂಗ್ರೆಸ್ ಪಕ್ಷವೂ ಕಳೆದ ಚುನಾವಣೆಯಲ್ಲಿ 1352 ಮತಗಳನ್ನ ಪಡೆದಿತ್ತು. ಈ ಬಾರಿ 4597 ಮತಗಳನ್ನ ಪಡೆದಿದೆ. ಈ ಮೂಲಕ ಕಾಂಗ್ರೆಸ್ ಕೂಡಾ ಹೆಚ್ಚು ಮತಗಳನ್ನ ಪಡೆದಿದೆ.
ಕಳೆದ ಚುನಾವಣೆಯಲ್ಲಿ ಹೊರಟ್ಟಿಯವರು ಪಡೆದ 7480 ಹಾಗೂ ಬಿಜೆಪಿಯ ಮಾ.ನಾಗರಾಜ ಅವರು ಪಡೆದ 4371 ಮತಗಳನ್ನ ಸೇರಿಸಿದರೇ ಈ ಬಾರಿ ಹೊರಟ್ಟಿಯವರು 11851 ಮತಗಳನ್ನ ಪಡೆಯಬೇಕಾಗಿತ್ತು. ಹಾಗಾದರೇ, ಇಲ್ಲಿ ಯಾರ ವರ್ಚಸ್ಸು ಕಡಿಮೆಯಾಗಿದೆ ಮತ್ತೂ ಯಾರ ವರ್ಚಸ್ಸು ಹೆಚ್ಚಾಗಿದೆ ಎಂಬ ಪ್ರಶ್ನೆ ಮೂಡತ್ತೆ.