ಧಾರವಾಡ-71 ಕ್ಷೇತ್ರದಲ್ಲಿ ನಡೆಯುತ್ತಿರುವುದೇನು.. ಇಸ್ಮಾಯಿಲ್-ಯತ್ನಾಳ- ಬಿಜೆಪಿ ಮುಖಂಡರು….!?

ಧಾರವಾಡ: ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲೆಸುವುದು ರೂಢಿ. ಆದರೆ, ಮದುವೆಯಾಗದೇ ಕುಲಾಯಿ ಹೊಲೆಸುವುದು ಸಾಧ್ಯವೇಯಿಲ್ಲ. ಅಂಥಹ ಸ್ಥಿತಿ ಧಾರವಾಡ-71 ಕ್ಷೇತ್ರದಲ್ಲಿ ನಿರ್ಮಾಣವಾಗಿದ್ದು, ರಾಜಕೀಯ ಪಂಡಿತರಿಗೆ ಒಂದು ಸ್ಪಷ್ಟತೆ ಕಾಣತೊಡಗಿದೆ.
ಧಾರವಾಡ-71ರ ಕ್ಷೇತ್ರಕ್ಕೆ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ ತಮಾಟಗಾರ ‘ಟವೆಲ್’ ಹಾಕುತ್ತಿದ್ದಾರೆ. ಅಸಲಿಗೆ ಚುನಾವಣೆ ಇರೋದು ಬರೋಬ್ಬರಿ 14 ತಿಂಗಳುಗಳ ನಂತರ. ಅಲ್ಲಿಯವರೆಗೆ ಏನೇನು ನಡೆಯತ್ತೆ ಎಂಬುದು ಯಾರಿಗೂ ಗೊತ್ತಿಲ್ಲ.
ಮೊದಲು ಈ ವೀಡೀಯೋವನ್ನೊಮ್ಮೆ ನೋಡಿ ಬಿಡಿ.. ಪೂರ್ಣವಾಗಿ ನೋಡಿದರೇ ಸ್ಪಷ್ಟತೆ ಗೋಚರವಾಗತ್ತೆ.
ಕೆಲವು ದಿನಗಳ ಹಿಂದೆ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ ಇಸ್ಮಾಯಿಲ ತಮಾಟಗಾರ ಅವರು, ಪಂಚಮಸಾಲಿ ಮುಖಂಡ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನ ಹಿಗ್ಗಾ-ಮುಗ್ಗಾ ಹೀಯಾಳಿಸಿ, ಎಚ್ಚರಿಕೆ ನೀಡಿದ್ದರು.
ತಮಾಟಗಾರ ಬಗ್ಗೆ ಪ್ರಶ್ನಿಸಿದಾಗ, ಯತ್ನಾಳ ಅವರು ಕೂಡಾ, ಅಷ್ಟೇ ತುಚ್ಛವಾಗಿ ‘ಇಂಥಾ ಚಿಲ್ರೆಯವರನ್ನ ಭಾಳ ಮಂದಿ ನೋಡೇನಿ’ ಎಂದು ಗುಡುಗಿದ್ದರು.
ಇದಾದ ಕೆಲವೇ ದಿನಗಳಲ್ಲಿ ಧಾರವಾಡ-71 ಕ್ಷೇತ್ರದಲ್ಲಿ ಮುಸ್ಲಿಂ ಸಮಾಜದ ಸಭೆ ಕರೆದು, ಅದರಲ್ಲಿ ನನಗೆ ಸಿಂಬಾಲ್ ಇಲ್ಲದಿದ್ರೂ 50 ಸಾವಿರ ಮತಗಳು ಬೀಳತ್ತೆ ಎಂದು ತಮಾಟಗಾರ ಹೇಳಿಕೊಂಡರು.
ಇದಾದ ಮೂರನೇಯ ದಿನಕ್ಕೆ ಬಿಜೆಪಿಯ ಮುಖಂಡರು, ಬೆಂಗಳೂರಿನಲ್ಲಿ ಶಾಸಕ ಬಸವನಗೌಡ ಯತ್ನಾಳ ಅವರನ್ನ ಧಾರವಾಡಕ್ಕೆ ಆಹ್ವಾನ ಮಾಡಿದ್ರು.

ಇಂದು #ಬೆಂಗಳೂರಿನ_ಕರ್ನಾಟಕದ_ವಿಧಾನಸಭೆಯಲ್ಲಿ #ಧಾರವಾಡ_71ರ_ಜನಪ್ರೀಯ_ಶಾಸಕರಾದ #ಶ್ರೀ_ಅಮೖತ_ದೇಸಾಯಿಯವರ_ನೇತೃತ್ವದಲ್ಲಿ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಿಜಾಪುರದ ಶಾಸಕರಾದ #ಶ್ರೀ_ಬಸನಗೌಡ_ಪಾಟೀಲ್_ಯತ್ನಾಳ್ ಅವರಿಗೇ ವಿರೋಧಿಗಳ ಪಂಥಾಹ್ವಾನ ಸ್ವೀಕಾರ ಮಾಡಿ ವಿರೋಧಿಗಳಿಗೇ ತಕ್ಕ ಉತ್ತರ ಕೂಡಲು #ಗಂಡು_ಮಟ್ಟಿನ_ನಾಡು_ಧಾರವಾಡ ಜಿಲ್ಲೆಗೆ ಬರಲು ಆಹ್ವಾನ ನೀಡಲಾಯಿತು….
ಈ ಸಂದರ್ಭದಲ್ಲಿ ಅಥಣಿ ಶಾಸಕರಾದ ಶ್ರೀ ಮಹೇಶ್ ಕುಮಟಳ್ಳಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಶಂಕರ ಕುಮಾರದೇಸಾಯಿ, ಬಿಜೆಪಿ ಧಾರವಾಡ-71(ನಗರ) ಅಧ್ಯಕ್ಷರಾದ ಶ್ರೀ ಶಕ್ತಿ ಹಿರೇಮಠ ಇದ್ದರು…



#ಅತಿ_ಶೀಘ್ರದಲ್ಲಿ_ಗಂಡು_ಮಟ್ಟಿನ_ನಾಡು_ಧಾರವಾಡ_ಜಿಲ್ಲೆಗೆ #ಹಿಂದೂ_ಹುಲಿ
Shankar Komar Desai Siddanagouda Patil Sid
ಅಸಲಿಗೆ ಪಂಚಮಸಾಲಿ ಮುಖಂಡ ಬಸವನಗೌಡ ಪಾಟೀಲ ಅವರನ್ನ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಶಿಗ್ಗಾಂವಿ ಬಳಿ ಖಾಸಗಿಯಾಗಿ ಭೇಟಿಯಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ. ಇದಾದ ಬಳಿಕವೇ ಇಸ್ಮಾಯಿಲ್ ತಮಾಟಗಾರ, ಯತ್ನಾಳರನ್ನ ಹೀಗೇಳಿದ್ದಿದ್ದು ನಂತರ ತಾವು ಆಕಾಂಕ್ಷಿಯಂದು ಸಾರ್ವಜನಿಕವಾಗಿ ಹೇಳಿದ್ದು, ತದನಂತರ ಬಿಜೆಪಿಯ ಮುಖಂಡರು ಧಾರವಾಡಕ್ಕೆ ಯತ್ನಾಳರನ್ನ ಆಹ್ವಾನಿಸಿದ್ದು, ಎಲ್ಲವೂ ಅಲ್ಲಲ್ಲಿ ಸಾಮ್ಯತೆಯನ್ನ ಕಂಡು ಕೊಳ್ಳುತ್ತಿದೆ ಅನಿಸುತ್ತಿದೆ ಅಲ್ವೇ… ಹಾಗಾದ್ರೇ, ಇಸ್ಮಾಯಿಲ ತಮಾಟಗಾರ ಹಿಂದೆ ಇರೋದು ಯಾರೂ….!?
ಉತ್ತರದ ನಿರೀಕ್ಷೆಯಲ್ಲಿ..