Posts Slider

Karnataka Voice

Latest Kannada News

ಧಾರವಾಡ-71 ಕ್ಷೇತ್ರದವರೂ ಅರವಿಂದ ಬೆಲ್ಲದರ ಪೋಟೊ ಹಾಕಬೇಕಿತ್ತಾ..!? ಮುಸ್ಲಿಂರಿಂದ ಬ್ಯಾನರ್ ಹರಿಸಿದ್ದು ಯಾರೂ…!?

1 min read
Spread the love

ಧಾರವಾಡ: ನೂತನವಾಗಿ ಸಚಿವರಾದ ನಂತರ ಮೊದಲ ಬಾರಿಗೆ ಧಾರವಾಡಕ್ಕೆ ಆಗಮಿಸಿದ ಸಮಯದಲ್ಲಿ, ಶಾಸಕ ಅರವಿಂದ ಬೆಲ್ಲದ ಅವರ ಭಾವಚಿತ್ರವನ್ನ ಬ್ಯಾನರಿನಲ್ಲಿ ಹಾಕಿಲ್ಲವೆಂದು ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡ ವ್ಯಕ್ತಿಯೋರ್ವ ಧಾರವಾಡ- 71 ಕ್ಷೇತ್ರದ ಬ್ಯಾನರನ್ನ ಹರಿದು ಹಾಕಿರುವ ಪ್ರಕರಣ ನಡೆದಿದೆ.

ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಹಾಗೂ ಧಾರವಾಡ- 71 ಕ್ಷೇತ್ರದಲ್ಲಿನ ನಿತಿನ್ ಇಂಡಿ ಎಂಬುವವರು ನೂತನ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರಿಗಾಗಿ ಸ್ವಾಗತ ಕೋರುವ ಬ್ಯಾನರ್ ನ್ನ ಹಾಕಿದ್ದರು. ಅದರಲ್ಲಿ ಅವರ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಸೇರಿದಂತೆ ಬ್ಲಾಕ್ ನ ಬಹುತೇಕರ ಭಾವಚಿತ್ರವನ್ನ ಹಾಕಲಾಗಿದೆ.

ಇದನ್ನೇ ನೆಪ ಮಾಡಿಕೊಂಡ ಶಾಸಕ ಅರವಿಂದ ಬೆಲ್ಲದ ಕ್ಷೇತ್ರದ ಮುಸ್ಲಿಂ ವ್ಯಕ್ತಿಯೋರ್ವ ಸಾರ್ವಜನಿಕರ ಎದುರೇ ಬ್ಯಾನರನ್ನೇ ಹರಿದಿದ್ದಾನೆ. ತಕ್ಷಣವೇ ಪೊಲೀಸರು ಬಂದು ಕೇಳಿದಾಗ, ‘ಅರವಿಂದ ಬೆಲ್ಲದ ಪೋಟೊ ಹಾಕಿಲ್ರೀ’ ಎಂದಿದ್ದಾನೆ.

ಸ್ಥಳದಲ್ಲಿ ಗೊಂದಲ ಸೃಷ್ಠಿಯಾಗಬಾರದೆಂದು ಪೊಲೀಸರು ಆತನನ್ನ ಕರೆದುಕೊಂಡು ಹೋಗಿ, ವಿಚಾರಣೆ ಮಾಡಿ ಕಳಿಸಿದ್ದಾರೆ. ಅಸಲಿಗೆ ಬಿಜೆಪಿ ಕಾರ್ಯಕರ್ತ ನಿತಿನ್ ಇಂಡಿ ಮಾಡಿರುವ ತಪ್ಪಾದರೂ ಏನೂ..

ಧಾರವಾಡದ ರಾಜಕೀಯ ಬ್ಯಾನರ್ ಲೆವೆಲ್ ಗೆ ಇಳಿದಿರೋದು ತೀವ್ರ ಅಸಹ್ಯಕರವಲ್ಲವೇ..!? ಇದರಲ್ಲಿ ಮುಸ್ಲಿಂರನ್ನ ಮುಂದೆ ಮಾಡಿ, ಬ್ಯಾನರ್ ಹರಿಸಿದ್ದು ಯಾರೂ ಎಂಬುದು ಗೊತ್ತಾಗಬೇಕಿದೆ.


Spread the love

Leave a Reply

Your email address will not be published. Required fields are marked *