ಹೋರಾಟ: ನಿವೃತ್ತ ನೌಕರರಿಗೂ ನೆಮ್ಮದಿಯಿಲ್ಲ

ಧಾರವಾಡ: ಹಲವು ವರ್ಷಗಳು ಕಳೆದರೂ ಬ್ಯಾಂಕ್ ನೌಕರರ ಹಾಗೂ ನಿವೃತ್ತ ಬ್ಯಾಂಕ್ ನೌಕರರ ಬೇಡಿಕೆಗಳನ್ನು ಈಡೇರಿಸದ ಸರ್ಕಾರಗಳ ವಿರುದ್ದ ಇಂದು ಭಾರತೀಯ ಸ್ಟೇಟ್ ಬ್ಯಾಂಕ್ ಧಾರವಾಡದ ಮುಖ್ಯ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಎಸ್.ಎಲ್ ಕುಲಕರ್ಣಿ ಮಾತನಾಡಿ, 25 ವರ್ಷಗಳಿಂದ ಬ್ಯಾಂಕ್ ನೌಕರರ ಪೆನ್ಷನ್ ಪರಿಷ್ಕರಣೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಅಲ್ಲದೆ ಈಗಿರುವ 15% ಫ್ಯಾಮಿಲಿ ಪೆನ್ಷನ್ ಅನ್ನು 30% ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಕಿಶೋರ್, ಎಂ.ವಿ.ಹೊಂಡೆಪ್ಪನವರ, ಶ್ರೀಕಾಂತ ಆರ್.ಕೆ, ಕೆ.ಬಿ. ಬಳ್ಳೂರ, ಸುರೇಶ್ ಗಾವಡೆ, ಸುಧೀರ ಮೊರಬ ಸೇರಿದಂತೆ ಅನೇಕ ನಿವೃತ್ತ ಬ್ಯಾಂಕ್ ಉದ್ಯೋಗಿಗಳು ಭಾಗವಹಿಸಿ ತಮ್ಮ ಬೇಡಿಕೆ ಈಡೇರಿಕೆಗೆ ಒಕ್ಕೊರಲಿನಿಂದ ಒತ್ತಾಯಿಸಿದರು.