ಮಾನ್ವಿಯಲ್ಲಿ ಬ್ಯಾಂಕ್ ಕಳ್ಳತನ ಯತ್ನ- ಪೊಲೀಸರು ಬಂದು ಏನು ಮಾಡಿದ್ರು..

ರಾಯಚೂರು: ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಬ್ಯಾಂಕ್ ಗುರುವಾರ ಬೆಳಗಿನ ಜಾ 3 ಗಂಟೆಗೆ ಕಳ್ಳರು ದರೊಡೆ ಮಾಡಲು ಯತ್ನಮಾಡಿದ್ದಾರೆ.
ಬ್ಯಾಂಕ್ ನ ಹೊರಡೆಯ ಸಿಸಿ ಕ್ಯಾಮರ ಜಖಂ ಮಾಡಿ ವೈರ್ ಗಳನ್ನು ಕಿತ್ತಿ ಎಸೆದು ಮುಖ್ಯ ಬಾಗಿಲು ಹೊಡೆದು ಬ್ಯಾಂಕ್ ಒಳಗೆ ಹೋಗಿದ್ದಾರೆ.
ಅದೇ ವೇಳೆಗೆ ಪೊಲೀಸರು ರಾತ್ರಿ ಗಸ್ತಗೆ ಬಂದಾಗ ಬ್ಯಾಂಕ್ ಬಾಗಿಲು ತೆರೆದಿದ್ದು ನೋಡಿ ಪೊಲೀಸರು ಬ್ಯಾಂಕ್ ಒಳಗೆ ಹೋಗಿದ್ದಾರೆ ಪೊಲೀಸರು ಬಂದಿದ್ದು ಕಂಡ 3 ಜನ ಕಳ್ಳರು ಓಡಿ ಹೋಗುವಾಗ ಒಬ್ಬ ಕಳ್ಳ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಇಬ್ಬರು ಪರಾರಿಯಾಗಿದ್ದಾರೆ.
ನಂತರ ಪಿಎಸ್ಐ ಸಿದ್ರಾಮ ಬಿದರಾಣಿ ಬಂದು ಪರಿಶೀಲಿಸಿದ್ದಾರೆ.
2 ದಿನದ ಹಿಂದೆ ಮಾನ್ವಿ ಪಟ್ಟಣದ ಕೆನರಾ ಬ್ಯಾಂಕ್ ದರೊಡೆಗೆ ಯತ್ನ ನಡೆದಿತ್ತು.
ಇನ್ನೂ ಇಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.