ನಿಮ್ಮಲ್ಲಿ ಮೂರು ಬಂದೂಕು ಇವೇಯಾ.. ಹಾಗಿದ್ದರೇ ಒಂದನ್ನ ಮರಳಿಸಿ..!
ಹುಬ್ಬಳ್ಳಿ: ಎರಡಕ್ಕಿಂತ ಹೆಚ್ಚು ಬಂದೂಕುಗಳನ್ನು ಹೊಂದಿರುವ ಲೈಸನ್ಸದಾರರ ಹೆಚ್ಚುವರಿ ಬಂದೂಕನ್ನು ಜಮೆ ಮಾಡಬೇಕೆಂದು ಪೊಲೀಸ್ ಆಯುಕ್ತ ಆರ್.ದಿಲೀಪ ಲೈಸನ್ಸದಾರರಲ್ಲಿ ಕೇಳಿಕೊಂಡಿದ್ದಾರೆ.
ಉಲ್ಲೇಖ: ಸರ್ಕಾರದ ಪತ್ರ ಕ್ರಮ : ಸಂಖ್ಯೆ:ಎಚ್‍ಡಿ/267/ಕೆಎಎ/2018 : ದಿನಾಂಕ:03-06-2020. ಉಲ್ಲೇಖಿತ ಸರ್ಕಾರದ ಪತ್ರದಲ್ಲಿ, ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆ, 2019 ರ ಕಲಂ 3ರನ್ವಯ ಇತ್ತೀಚಿಗೆ ತಿದ್ದುಪಡಿ ಮಾಡಿದ ನಿಬಂಧನೆಯಡಿಯಲ್ಲಿ ಲೈಸನ್ಸದಾರರು ಪಡೆದಿರುವ ಬಂದೂಕು ಪರವಾನಿಗೆಯಲ್ಲಿ ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಕಾರಣ ಮೂರನೇ ಬಂದೂಕಿಗೆ ಪರವಾನಿಗೆಯನ್ನು ಪಡೆದ ಪರವಾನಿಗೆದಾರರಿದ್ದಲ್ಲಿ, ಅಂತಹವರಿಗೆ ಸೂಕ್ತ ತಿಳುವಳಿಕೆ ನೀಡಿ ಮೂರನೇ ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಲಾಗಿದೆ.
ಹೆಚ್ಚುವರಿ ಜಿಲ್ಲಾದಂಢಾದಿಕಾರಿಗಳು ಮತ್ತು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ ರವರ ಕಾರ್ಯಾಲಯದಿಂದ ನೀಡಿದ ಲೈಸನ್ಸದಾರರು ಮೂರು ಆಯುಧಗಳು ಹೊಂದಿದ್ದಲ್ಲಿ, ಅಂತಹವರು ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯನ್ವಯ ಎರಡಕ್ಕಿಂತ ಹೆಚ್ಚುವರಿಯಾಗಿ ಹೊಂದಿರುವ ಮೂರನೇ ಆಯುಧವನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದಿನಾಂಕ: 13-12-2020ರೊಳಗೆ ನೀಡುವಂತೆ ಕೋರಲಾಗಿದೆ.