Posts Slider

Karnataka Voice

Latest Kannada News

ನಾಳೆ ಹುಬ್ಬಳ್ಳಿ-ಧಾರವಾಡ ಬಂದ್- ಬೆಂಬಲ ನೀಡಿದ್ದು ಯಾರು ಯಾರೂ ಗೊತ್ತಾ.. ?

Spread the love

ಹುಬ್ಬಳ್ಳಿ: ಎಪಿಎಂಸಿಯಲ್ಲಿಯ ವ್ಯಾಪಾರಸ್ಥರ ಸಂಘದ ಸಭಾ ಭವನದಲ್ಲಿ ನಡೆದ ರೈತ, ಕಾರ್ಮಿಕ ಕನ್ನಡಪರ, ದಲಿತ ಹಾಗೂ ಜನಪರ ಸಂಘಟನೆಗಳ ಸಮಾವೇಶವು ಎಪಿಎಂಸಿ, ಭೂ ಸುಧಾರಣಾ, ಕಾರ್ಮಿಕ ಕಾನೂನುಗಳು ಸೇರಿದಂತೆ ವಿವಿಧ ಜನವಿರೋಧಿ ಕಾನೂನುಗಳ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 28 ರಂದು ಕರೆ ನೀಡಲಾದ ಕರ್ನಾಟಕ ಬಂದ್ ಕರೆಯನ್ನು ಹುಬ್ಬಳ್ಳಿ ಧಾರವಾಡದಲ್ಲಿ ಯಶಸ್ವಿಗೋಳಿಸಲು 50ಕ್ಕೂ ಹೆಚ್ಚು ಸಂಘಟನೆ ಸರ್ವಾನುಮತದ ತೀರ್ಮಾನ ಮಾಡಿದವು.

ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಕಿಸಾನ್ ಸೆಲ್, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ಕರ್ನಾಟಕ ಕಳಸಾ ಬಂಡೂರಿ ಹೋರಾಟ ಸಮಿತಿ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ವಿಮಾ ನೌಕರರ ಸಂಘ, ಗ್ರಾಮೀಣ ಬ್ಯಾಂಕ ನೌಕರರ ಸಂಘ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ಸಂಗ್ರಾಮ ಸೇನೆ, ಅಟೋ ಚಾಲಕರ ಸಂಘಗಳು, ಪೌರ ಕಾರ್ಮಿಕರ ಸಂಘ, ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘ, ಬೀದಿಬದಿ ವ್ಯಾಪಾರಸ್ಥರ ಸಂಘ, ಹುಬ್ಬಳ್ಳಿ ನಾಗರಿಕ ಹೋರಾಟ ಸಮಿತಿ, ಜೈ ಭೀಮ ಸೇನೆ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಸಂವಿಧಾನ ಸುರಕ್ಷಾ ಸಮಿತಿ, ಎಪಿಎಂಸಿ ವ್ಯಾಪಾರಸ್ಥರ ಸಂಘಗಳು, ಜಮಾತೆ ಇಸ್ಲಾಮ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ರಂಗಭೂಮಿ ಗೊಂಬೆ ಆಟದ ಸಂಸ್ಥೆ, ಮುಂತಾದ ಜನಪರ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಪಿಐ, ಆಮ್ ಆದ್ಮಿ ಪಕ್ಷಗಳು ಹುಬ್ಬಳ್ಳಿ ಧಾರವಾಡ ಬಂದ್ ಬೆಂಬಲಿಸಲಿವೆ.

ಕೃಷಿ ಕ್ಷೇತ್ರವನ್ನು ಕಾರ್ಪೋರೇಟ ವಲಯಕ್ಕೆ ಒತ್ತೆ ಇಡುವ, ಲೂಟಿಗೆ ಅವಕಾಶ ಮಾಡಿಕೊಡುವ, ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ, ಸಾರ್ವಜನಿಕರ ಮೇಲೆ ತೀವ್ರ ದಾಳಿ ನಡೆಸಲಿರುವ ಜನವಿರೋಧಿ ಕಾನೂನು ತಿದ್ದುಪಡಿಗಳನ್ನು ವಾಪಸ್ಸ ಪಡೆಯಲು ಸಮಾವೇಶ ಕೇಂದ್ರ ರಾಜ್ಯ ಸರಕಾರಗಳನ್ನು ಒತ್ತಾಯಿಸಿತಲ್ಲದೇ ಇದರ ವಿರುದ್ದ ತೀವ್ರವಾದ ಚಳುವಳಿಯನ್ನು ನಡೆಸಲು ತೀರ್ಮಾನಿಸಿತು.

ಖ್ಯಾತ ಭಾಷಾ ತಜ್ಞ ಪದ್ಮಶ್ರೀ ಡಾ. ಜಿ.ಎನ್.ದೇವಿ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಕಾರ್ಮಿಕ ಮುಖಂಡ ಮಹೇಶ ಪತ್ತಾರ ಪ್ರಸ್ತಾವಣೆಯನ್ನು ಸಲ್ಲಿಸಿದರು. ಪ್ರಸ್ತಾವಣೆಯ ಮೇಲೆ ವಿವಿಧ ಸಂಘಟನೆಗಳ ಮುಖಂಡರಾದ ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ, ವಾಣಿಜ್ಯೋಧ್ಯ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲಡ್ಡದ, ಎಪಿಎಂಸಿ ಅಧ್ಯಕ್ಷ ಸಹದೇವಪ್ಪ, ಸುಡೇಕನವರ, ಮಾಜಿ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಅಬ್ದುಲ್ ವಹಾಬ ಮುಲ್ಲಾ, ಕಾಂಗ್ರೆಸ್ ಮುಖಂಡರಾದ ಪಿ.ಎಚ್.ನೀರಲಕೇರಿ, ಅನ್ವರ ಮುಧೋಳ, ಸಂವಿಧಾನ ಸುರಕ್ಷಾ ಸಮಿತಿ ಸಂಚಾಲಕ ಅಶ್ರಫ್ ಅಲಿ ಬಸೀರ, ಗ್ರಾಮೀಣ ಕೂಲಿಕಾರರ ಸಂಘಟನೆಯಿಂದ ಶಾರದಾ ದಾಬಡೆ, ರೈತ ಮುಖಂಡರಾದ ಕಲ್ಮೇಶ ಲಿಗಾಡಿ, ಶೋಭಾ ಚಲವಾದಿ, ಬಿ.ಎಸ್.ಸೊಪ್ಪಿನ,  ಸಿದ್ದು ತೇಜಿ, ಶಿವಣ್ಣ ಹುಬ್ಬಳ್ಳಿ, ಕಾರ್ಮಿಕ ಮುಖಂಡರಾದ ಪುಂಡಲೀಕ ಬಡಿಗೇರ, ವಿಜಯ ಗುಂಟ್ರಾಳ, ಬಾಬಾಜಾನ ಮುಧೋಳ, ಗುರುಸಿದ್ದಪ್ಪ ಅಂಬಿಗೇರ, ಬಿ.ಐ.ಈಳಿಗೇರ ಕನ್ನಡಪರ ಸಂಘಟನೆಗಳಿಂದ ಅಮೃತ ಇಜಾರಿ,  ಸಂಜು ದುಮ್ಮಕನಾಳ , ಮುತ್ತು ಬೆಳ್ಳಕ್ಕಿ, ದಲಿತ ಸಂಘಟನೆಗಳಿಂದ ಸುರೇಶ ಖಾನಾಪೂರ, ಲಕ್ಷ್ಮಣ ಬಕ್ಕಾಯಿ,  ಆಮ್ ಆದ್ಮೀ ಪಕ್ಷದ ಸಂತೋಷ ನರಗುಂದ, ವ್ಯಾಪಾರಸ್ಥರ ಸಂಘದ ಬಸವರಾಜ ಏಕಲಾಸಪೂರ, ಗಂಗನಗೌಡ ಪಾಟೀಲ, ಎ.ಎ.ಅತ್ತಾರ, ಸಲೀಂ ಬ್ಯಾಹಟ್ಟಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿ ಬೆಂಬಲಿಸಿ  ಮಾತನಾಡಿದರು. ಶಂಕರ ಹಲಗತ್ತಿ ಕಾರ್ಮಯಕ್ರಮ ನಿರೂಪಿಸಿದರು. ಎಪಿಎಂಸಿ ಸದಸ್ಯ ಜಗನ್ನಾಥಗೌಡ ಸಿದ್ದನಗೌಡರ, ಯುವ ಕಾಂಗ್ರಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ರಂಗಕರ್ಮಿ ಪ್ರಕಾಶ ಗರೂಡ,  ವಿಶ್ರಾಂತ ಕುಲಪತಿ ವಿ.ಬಿ.ಮಾಗನೂರ, ಅಬ್ದುಲ್ ರೇಹಮಾನ ಮುಲ್ಲಾ, ರಮೇಶ ಭೂಸ್ಲೆ, ವೀರಣ್ಣ ನೀರಲಗಿ, ಕರಿಯಪ್ಪ ದಳವಾಯಿ, ಮಂಜುನಾಥ ಹುಜರಾತಿ ಕರಿಯಪ್ಪ ಗಿರಿಸಾಗರ, ಕತಾಲಸಾಬ ಮುಲ್ಲಾ, ಬಸವಣ್ಣೆಪ್ಪ ನೀರಲಗಿ, ವಿನಾಯಕ ಗಾಳಿವಡ್ಡರ, ಚಿದಾನಂದ ಸವದತ್ತಿ, ನಿಂಗನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *