ಬನಶಂಕರಿ ಹೊಂಡದಲ್ಲಿ ತೇಲಾಡಿದ ಶವ ಯಾರದ್ದು ಗೊತ್ತಾ..?
ಬಾಗಲಕೋಟೆ: ನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನ ಹರಿದ್ರಾತೀರ್ಥ ಹೊಂಡದಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ.
ಮೃತ ವೃದ್ಧೆಯನ್ನ ಗೀತಾಬಾಯಿ ಅನಿಲ್ ಭಟ್ ಜೋಶಿ (65) ಎಂದು ಗುರ್ತಿಸಲಾಗಿದ್ದು ದೇವಸ್ಥಾನದ ಬಳಿಯೇ ವಾಸವಿದ್ದಳು ಎನ್ನಲಾಗಿದೆ.
ಹೊಂಡದಲ್ಲಿ ಬಿದ್ದಿದ್ದ ಶವವನ್ನ ಅಗ್ನಿಶ್ಯಾಮಕ ದಳದ ಸಿಬ್ಬಂಧಿ ಹೊರ ತೆಗದಿದ್ದು ಸಾವು ಹೇಗೆ ಸಂಭವಿಸಿದೆ ಎನ್ನುವ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.