ನವೆಂಬರನಲ್ಲಿ SSLC-PUC ಆರಂಭಿಸಿ: ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ
ಧಾರವಾಡ: ಶಾಲೆ-ಕಾಲೇಜುಗಳನ್ನ ಆರಂಭಿಸಬೇಕೋ ಬೇಡವೋ ಎಂಬ ನೂರೆಂಟು ಗೊಂದಲಗಳಿರುವಾಗ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ನವೆಂಬರನಲ್ಲಿ ಶಾಲೆ-ಕಾಲೇಜು ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರಾಯೋಗಿಕವಾಗಿ ನವೆಂಬರ್ 2ರಿಂದ ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಮುನ್ನಚ್ಚರಿಕೆ ಕ್ರಮವನ್ನ ತೆಗೆದುಕೊಂಡು ಶಿಕ್ಷಣ ನೀಡಲು ಮುಂದಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನ ನೋಡಿಕೊಂಡು ಹಂತ ಹಂತವಾಗಿ ಮುಂದಿನದ್ದರ ಬಗ್ಗೆ ಸಮಾಲೋಚನೆ ಮಾಡಬಹುದೆಂದು ಜಡಿ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಡಿಯವರು, ರಾಜ್ಯ ಸರಕಾರದಲ್ಲಿ ಹಿರಿಯ ರಾಜಕಾರಣಿಗಳು ಶಿಕ್ಷಣ ಮಂತ್ರಿಗಳಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕ್ರಮವನ್ನ ಜರುಗಿಸುತ್ತಾರೆ ಎಂಬ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ.
SSLU- PUC ಆರಂಭಿಸುವುದು ಸೂಕ್ತ. ಈ ಥರದ ಕ್ರಮವನ್ನ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳನ್ನ ಈರಣ್ಣ ಜಡಿ ಕೇಳಿಕೊಂಡಿದ್ದಾರೆ.