ಅಮೋನಿಯಂ ನೈಟ್ರೇಟ್ ಸ್ಪೋಟ- ನೂರರ ಗಡಿಯತ್ತ ಸತ್ತವರ ಸಂಖ್ಯೆ- ಸಾವಿರಾರೂ ಜನರಿಗೆ ಗಾಯ
ಬೈರೂತ್: ಗೋದಾಮಿನಲ್ಲಿ ಸಂಗ್ರಹವಾಗಿದ್ದ ಅಮೋನಿಯಂ ನೈಟ್ರೇಟ್ ಮಂಗಳವಾರ ಬೈರೂತ್ ಬಂದರನಲ್ಲಿ ಸ್ಪೋಟಗೊಂಡ ಪರುಣಾಮ ಸಾವಿರಾರೂ ಜನರು ತೀವ್ರವಾಗಿ ಗಾಯಗೊಂಡಿದ್ದು, 74ಕ್ಕೂ ಜನ ಸಾವಿಗೀಡಾದ ಘಟನೆ ಸಂಭವಿಸಿದೆ.
ಯಾವುದೇ ಸುರಕ್ಷತೆಯ ಕ್ರಮವನ್ನ ತೆಗೆದುಕೊಳ್ಳದೇ ಕಳೆದ ಆರು ವರ್ಷದಿಂದ ಸುಮಾರು 2750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನು ಮಾಡಲಾಗಿತ್ತು.
ಸ್ಪೋಟದ ಪರಿಣಾಮ ಹಲವರು ನಾಪತ್ತೆಯಾಗಿದ್ದು, ಬಹುತೇಕ 3700 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆಸಿರುವುದಾಗಿ ಲೆಬನಾನ್ ಆರೋಗ್ಯ ಸಚಿವ ಹಸ್ಸನ್ ಮಾಹಿತಿ ನೀಡಿದ್ದಾರೆ.
ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಅನೇಕರ ದೇಹಗಳು ಹುಡುಕಾಡಿದರೂ ಸಿಗದಾಗಿವೆ. ವಾಹನಗಳು ಸಂಪೂರ್ಣ ಜಖಂಗೊಂಡಿವೆ.