ಭೀಮಾ ತೀರದ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಬಂಧನ- ಐದು ಕೋಟಿಯ ಧಮಕಿ ಪ್ರಕರಣ
ವಿಜಯಪುರ: ಭೀಮಾತೀರದ ಚಿನ್ನದ ವ್ಯಾಪಾರಿಗೆ 5 ಕೋಟಿಗಾಗಿ ಧಮ್ಕಿ ಪ್ರಕರಣದ 2ನೇ ಆರೋಪಿ ಭೀಮಾತೀರದ ನಟೋರಿಯಸ್ ಬಾಗಪ್ಪ ಹರಿಜನನನ್ನ ಕಲಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ ಬಂಧಿಸಲಾಗಿದೆ.
ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಗೆ 5 ಕೋಟಿ ನೀಡುವಂತೆ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಾಗಪ್ಪನನ್ನ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, A1 ಆರೋಪಿ ಲಕ್ಷ್ಮಿಕಾಂತ ಇಲ್ಲಿಯವರೆಗೂ ನಾಪತ್ತೆಯಾಗಿದ್ದಾನೆ.
ಮೂರನೇ ಆರೋಪಿ ಮಹಾದೇವ ಸಾಹುಕಾರ್ ನಿಗೆ ಜಾಮೀನು ಈಗಾಗಲೇ ಸಿಕ್ಕಿದ್ದು ಕೋವಿಡ್ 19 ಟೆಸ್ಟ್ ಬಳಿಕ ನ್ಯಾಯಾಧೀಶರ ಎದುರು ಚಡಚಣ ಠಾಣೆ ಪೊಲೀಸರು ಹಾಜರುಪಡಿಸಲಿದ್ದಾರೆ..
ಜುಲೈ 22 ರಂದು ಮೂವರ ವಿರುದ್ಧ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.