ತೋಳ ಬಂತು ತೋಳವಲ್ಲವಿದು- ಕುರಿಗಳು ಸಾರ್ ಕುರಿಗಳು..!
1 min readಬಾಗಲಕೋಟೆ: ಉತ್ತರ ಕರ್ನಾಟಕ ಪ್ರಸಿದ್ಧ ಜಾನುವಾರು ಸಂತೆಯಲ್ಲಿ ಸುಳ್ಳು ವದಂತಿಗೆ ಗಾಬರಿಯಾಗಿ ಜನರು ದಿಕ್ಕಾಪಾಲಾಗಿ ಓಡಿದ ಘಟನೆ ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.
https://www.youtube.com/watch?v=RB0R9hgCkEM
ಕಳೆದ ದಿನ ಭಾರತ ಬಂದ್ ಹಿನ್ನೆಲೆಯಲ್ಲಿ ಈ ವದಂತಿ ದೊಡ್ಡ ಸದ್ದುಮಾಡಿದೆ. ಹೌದು.. ಎಂದಿನಂತೆ ಪ್ರತಿ ಮಂಗಳವಾರ ಜಾನುವಾರು ಜಾತ್ರೆ ಸುಗಮವಾಗಿ ನಡೆದಿತ್ತು. ಯಾರೋ ದುಷ್ಕರ್ಮಿಗಳು ಸಂತೆಯ ಸಮೀಪವೇ ಪ್ರತಿಭಟನಾಕಾರರನ್ನ ಪೊಲೀಸರು ಹೊಡೆದು ಓಡಿಸುತ್ತಿದ್ದಾರೆ, ಪೊಲೀಸರು ಬಂದ್ರು ಬಂದ್ರು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದೇ ತಡ, ಜಾನುವಾರು ಸಂತೆಯಲ್ಲಿ ನೆರೆದಿದ್ದವರು ದಿಕ್ಕು ತೋಚದೇ ಕುರಿಮೇಕೆ ಬಿಟ್ಟು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ.
ಜನರು ಹೀಗೆ ದಿಕ್ಕಾ ಪಾಲಾಗಿ ಓಡಿದ್ದೇ ತಡ ಕಳ್ಳರು ನಲವತ್ತಕ್ಕೂ ಹೆಚ್ಚು ಕುರಿ, ಮೇಕೆ, ಟಗರುಗಳನ್ನ ಕಳ್ಳತನ ಮಾಡಿದ್ದಾರೆನ್ನಲಾಗಿದೆ. ಇನ್ನು ಕೆಲವರು ಹಣವನ್ನೂ ಕಳೆದುಕೊಂಡು ಓಡಿ ಹೋಗಿದ್ದಾರೆನ್ನಲಾಗಿದೆ. ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿ ಜಾನುವಾರುಗಳನ್ನ ಕಳ್ಳತನ ಮಾಡಿದ್ದಾರೆನ್ನಲಾಗುತ್ತಿದೆ.
ಇದು ತೋಳ ಬಂತು ತೋಳು ಎನ್ನುವ ಕಥೆಯಂತಾಗಿದ್ದು, ಪೊಲೀಸರು ಕುರಿ ಕಳೆದುಕೊಂಡವರ ಮಾಹಿತಿಯನ್ನ ಪಡೆದು, ವದಂತಿ ಹಬ್ಬಿಸಿದವರನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.