ಬಾಗಲಕೋಟೆ ಬದುಕು ದುರ್ಭರ: ಕಣ್ಮುಂದೆ ಬೀಳುತ್ತಿವೆ ಮನೆಗಳು..
1 min readಬಾಗಲಕೋಟೆ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಮದುವರೆದಿದ್ದು ಮಣ್ಣಿನಮನೆಗಳ ಕುಸಿತ ಹೆಚ್ಚಾಗುತ್ತಿದ್ದು, ಕೆಲವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆಗಳು ನಡೆದಿವೆ.
ಹೌದು.. ಜಿಲ್ಲೆಯ ಮಹಲಿಂಗಪುರದಲ್ಲಿ ಮಣ್ಣಿನ ಮನೆಯ ಛಾವಣಿ ಹಾಗೂ ಗೋಡೆ ಕುಸಿದು ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿದ್ದ ಮನೆಯ ಮಾಲೀಕ ಲಕ್ಷ್ಮಣ ಗಾಡಿವಡ್ಡರ್ (45)ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ರಬಕವಿ ಬನಹಟ್ಟಿ ತಾಲೂಕಿನಲ್ಲೂ ಸುಮಾರು ಅರವತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದೆ.
ಇನ್ನು ಜಮಖಂಡಿ ತಾಲೂಕಿನ ಕಲಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬೀಳುವ ದೃಶ್ಯವನ್ನ ಸ್ಥಳೀಯರು ಮೊಬೈಲನಲ್ಲಿ ಸೆರೆ ಹಿಡಿದಿದ್ದಾರೆ.ಗೋಡೆ ಬೀಳುವ ಐದುನಿಮಿಷ ಮೊದಲು ಮಹಿಳೆಯರು ಬಿದ್ದ ಗೋಡೆಯ ಪಕ್ಕದಲ್ಲೇ ಬಟ್ಟೆ ತೊಳೆದುಕೊಂಡು ಹೋಗಿದ್ದಾರೆ.ಐದು ನಿಮಿಷ ತಡವಾಗಿದ್ರೂ ದೊಡ್ಡ ಅನಹುತ ಸಂಭವಿಸ್ತಾ ಇತ್ತು.ಬಟ್ಟೆ ತೊಳೆದು ಮಹಿಳೆಯರು ಒಳಗೆ ಹೋಗ್ತಿದ್ದಂತೆ ಎದುರಿನ ಗೋಡೆ ಕುಸಿದು ಬಿದ್ದಿದೆ.
ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಮಣ್ಣಿನ ಮನೆಗಳು ಕುಸಿದು ಬೀಳುತ್ತಿದ್ದು ಜನರು ಆತಂಕದಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸ್ಥಿತಿ ನಿರ್ಮಾಣವಾಗಿದೆ.