Posts Slider

Karnataka Voice

Latest Kannada News

ಮೈ ಹೂಂ ಬಚ್ಚಾಖಾನ: ಕ್ಯಾ ಪೂಚ್ತೇ ಪೂಚೋ.. ಇವತ್ತೇನೆಂದಿದ್ದಾನೆ ಗೊತ್ತಾ..!

1 min read
Spread the love

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ನಡೆದಿದ್ದ ಇರ್ಫಾನ್ ಹಂಚಿನಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ಸೈಯದ ಸುಲೇಮಾನ ಬಚ್ಚಾಖಾನ ಖಾದ್ರಿ ವಿಚಾರಣೆ ನಡೆಯುತ್ತಿದ್ದು, ಹಲವು ವಿಚಾರಗಳು ಬಹಿರಂಗಗೊಳ್ಳುತ್ತಿವೆ ಎಂದು ಹೇಳಲಾಗಿದೆ.

ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳ ಹತ್ಯೆಗೈದ ಹಲವರು ಈಗಾಗಲೇ ಬಂಧನವನ್ನ ಮಾಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಒಂದು ಕಾಲದ ಬಾಂಬೆ ಮೂಲದ ಶಾರ್ಫ್ ಶೂಟರ್ ಬಚ್ಚಾಖಾನ್ ಹೆಸರು ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಕಾರಾಗೃಹದಲ್ಲಿದ್ದ ಬಚ್ಚಾಖಾನನನ್ನ ಐದು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಇನ್ಸಪೆಕ್ಟರ್ ಶಿವಾನಂದ ಕಮತಗಿ ಹಾಗೂ ಅಲ್ತಾಫ ಮುಲ್ಲಾ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಬಚ್ಚಾಖಾನ್, ಬಹುತೇಕ ಪೊಲೀಸರ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸುತ್ತಿದ್ದಾನೆಂದು ತಿಳಿದು ಬಂದಿದೆ.

ಪ್ರೂಟ್ ಇರ್ಫಾನ್ ಕೊಲೆಯ ಸುತ್ತಮುತ್ತ ನಡೆದ ಎಲ್ಲ ಘಟನೆಯನ್ನೂ ಸವಿಸ್ತಾರವಾಗಿ ವಿವರಣೆ ಕೊಟ್ಟಿದ್ದಾನೆಂದು ಗೊತ್ತಾಗಿದೆ. ಆದರೆ, ಈ ಕೊಲೆಗೆ ಸುಫಾರಿ ನೀಡಿದ್ದು, ಯಾರೂ ಎಂಬುದು ಇನ್ನೂ ಸರಿಯಾದ ಮಾಹಿತಿ ಗೊತ್ತಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ಮೂರು ದಿನಗಳವರೆಗೆ ಬಚ್ಚಾಖಾನ ಕಸ್ಟಡಿ ಮುಂದುವರೆಯಲಿದ್ದು, ಇನ್ನೂ ಹೆಚ್ಚಿನ ಮಾಹಿತಿಯನ್ನೂ ಕಲೆ ಹಾಕುವ ಸಾಧ್ಯತೆಯಿದೆ.


Spread the love

Leave a Reply

Your email address will not be published. Required fields are marked *

You may have missed