ರಾಯಚೂರಲ್ಲಿ ಸಚಿವ ಬೈರತಿ ಬಿಜೆಪಿಯವರ ಬಗ್ಗೆ ಏನಂದ್ರು ಗೊತ್ತಾ..?
1 min readರಾಯಚೂರು: ಡ್ರಗ್ಸ್ ಪ್ರಕರಣದಲ್ಲಿ ಯಾರೇ ಇದ್ದರೂ ತನಿಖೆ ಆಗಲಿ. ಬೆಂಗಳೂರಿನ ಬಿಜೆಪಿ ಶಾಸಕರ ಮಕ್ಕಳಿದ್ದರೂ ತನಿಖೆಯಾಗಲಿ ಎಂದು ರಾಯಚೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ರಾಗಿಣಿ, ಸಂಜನಾ ಅವರು ಅಧಿಕಾರಿಗಳ ಮುಂದೆ ಯಾರ ಹೆಸರು ಹೇಳಿದ್ದಾರೋ ಅವರ ವಿರುದ್ದವೂ ತನಿಖೆಯಾಗಲಿ. ಈ ಬಗ್ಗೆ ಗೃಹ ಸಚಿವರು ಪ್ರಕರಣ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸುತ್ತಾರೆ. ಪ್ರಕರಣ ಬಗ್ಗೆ ಅವರು ನೋಡಿಕೊಳ್ಳುತ್ತಾರೆ ಎಂದು ಎಂದು ಹೇಳಿದರು.
ಡ್ರಗ್ಸ್ ದಂಧೆಯಲ್ಲಿ ಯಾರು ತೊಡಗಿದ್ದಾರೆ. ಅಂತವರ ವಿರುದ್ಧ ನಮ್ಮ ಸರ್ಕಾರ ಹಾಗೂ ಸಿಎಂ ಕ್ರಮ ಕೈಗೊಳ್ಳುತ್ತೆ. ಯಾರೇ ಆಗಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ಕುಡಿಯುತ್ತಾರೆ. ಬಿಜೆಪಿ ನಾಯಕರು ಯಾರೇ ಇದ್ರೂ ಹೆಸರು ಬಹಿರಂಗಪಡಿಸಲಿ ಎಂದರು.