ನಾಳೆಯಿಂದ ಅರಾಮಾಗಿ ಕೂತು ಕುಡಿಬಹುದಂತೆ: ಬಾರ್-ರೆಸ್ಟೋರೆಂಟ್ ಆರಂಭಕ್ಕೆ ಗ್ರೀನ್ ಸಿಗ್ನಲ್
1 min readಬೆಂಗಳೂರು: ಮದ್ಯ ಪ್ರಿಯರಿಗೆ ಖುಷಿಯ ವಿಚಾರವನ್ನ ಸರಕಾರ ನೀಡಿದ್ದು, ನಾಳೆಯಿಂದ ಬಾರ್-ರೆಸ್ಟೋರೆಂಟ್ ಪಬ್ ಸೇರಿದಂತೆ ಎಲ್ಲ ಮಾದರಿಯ ಮದ್ಯದಂಗಡಿಗಳು ಪ್ರಾರಂಭ ಮಾಡಲು ಆದೇಶ ಹೊರಡಿಸಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಮದ್ಯದ ಪ್ರಕಾರಗಳು ಬಂದ್ ಆಗಿದ್ದವು. ಅನೇಕರ ಒತ್ತಾಯ ಆರಂಭವಾದ ನಂತರ ಕೇಂದ್ರ ಸರಕಾರದಿಂದಲೂ ಹೊಸ ಮಾರ್ಗಸೂಚಿಗಳನ್ನ ಅನುಸರಿಸಿ ಮದ್ಯದ ಪಾರ್ಸಲ್ ಕೊಡುವುದಕ್ಕೆ ಪರವಾನಿಗೆ ನೀಡಲಾಗಿತ್ತು. ಇಂದಿಗೆ ಲಾಕ್ ಡೌನ್ ನ ಮತ್ತೊಂದು ಹಂತ ಮುಗಿದಿದ್ದು, ನಾಳೆಯಿಂದ ಎಲ್ಲ ಪ್ರಕಾರದ ಮದ್ಯದ ಶಾಪ್ ಗಳು ಓಪನ್ ಆಗಲಿವೆ.
ಕೇಂದ್ರ ಸರಕಾರ ಹೊರಡಿಸಿರುವ ಎಸ್ ಓಪಿ ಆದೇಶದಲ್ಲಿ ತಿಳಿಸಿರುವ ಎಲ್ಲಾ ಅಂಶಗಳನ್ನ ಕಟ್ಟುನಿಟ್ಟಿನ ಷರತ್ತಿನೊಂದಿಗೆ ಆರಂಭಿಸಲು ಆದೇಶ ಮಾಡಲಾಗಿದೆ. ರಾಜ್ಯದಲ್ಲಿರುವ ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-7ಎ (ನಮೂನೆ-14), ಸಿಎಲ್-7ಬಿ (ನಮೂನೆ-15), ಸಿಎಲ್-9, ಸಿಎಲ್-17, ಸಿಎಲ್-18, ವೈನ್ ಟಾವರಿನ್, ಬಾಟಲ್ಡ್ ಬೀರ್, ಆರ್ ವಿಬಿ(ಪಬ್) ಮತ್ತು ಮೈಕ್ರೋಬ್ರಿವರಿ ಸನ್ನದುಗಳಲ್ಲಿನ ರೆಸ್ಟೋರೆಂಟಗಳಲ್ಲಿ ಅಪ್ ಟು 50% ಸೀಟಿಂಗ್ ಕೆಪ್ಯಾಸಿಟಿಯೊಂದಿಗೆ ಆರಂಭಿಸಲು ಆದೇಶ ಮಾಡಲಾಗಿದೆ.