ತೀರ್ಲಾಪುರದಲ್ಲಿ “ಬಾರ್ ಬರಲ್ಲ”- ಅಹೋರಾತ್ರಿ ಧರಣಿ ಹಿಂಪಡೆದ ಸೊಬರದಮಠ…!
1 min readನವಲಗುಂದ: ತಾಲೂಕಿನ ತೀರ್ಲಾಪುರ ಗ್ರಾಮದಲ್ಲಿ ನೂತನವಾಗಿ ಆರಂಭಿಸಲು ಉದ್ದೇಶಿಸಿದ್ದ ಅಶೋಕ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಂದ್ ಮಾಡುವಂತೆ ರೈತ ಸೇನಾ ಮುಖ್ಯಸ್ಥ ವಿರೇಶ ಸೊಬರದಮಠ ನಡೆಸಿದ್ದ ಹೋರಾಟ ಯಶಸ್ವಿಗೊಂಡಿದ್ದು, ತಹಶೀಲ್ದಾರವರು ಬಾರ್ ಗೆ ಅವಕಾಶ ಕೊಡುವುದಿಲ್ಲವೆಂದು ಪತ್ರ ಕೊಟ್ಟ ನಂತರ ಹೋರಾಟವನ್ನ ಹಿಂದೆ ಪಡೆದಿದ್ದಾರೆ.
ತಿರ್ಲಾಪೂರ ಗ್ರಾಮವನ್ನ ಸರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರೆಲ್ಲರು ಸೇರಿ “ಬಾರ್ ಮತ್ತು ರೆಸ್ಟೋರೆಂಟ್ ಪ್ರಾರಂಭಮಾಡುವನ್ನ ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದ್ದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ನವೀನ ಹುಲ್ಲೂರ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು, ಪೋಲಿಸ್ ಇಲಾಖೆಯವರು ಧರಣಿ ನಿರತ ರೈತರೊಂದಿಗೆ ಚರ್ಚಿಸಿ, ಪ್ರಾರಂಭವಾದ ಅಶೋಕ ಬಾರ್ ಮತ್ತು ರೆಸ್ಟೋರೆಂಟ್ ಬಂದ ಮಾಡಬೇಕೆಂದು ಮನವಿ ಸ್ವೀಕರಿಸಿ, ಮಾತನಾಡಿದ ನವಲಗುಂದ ತಹಶೀಲ್ದಾರ್ ನವೀನ್ ಹುಲ್ಲೂರ್, ಈ ಸರಾಯಿ ಅಂಗಡಿಯನ್ನ ಬಂದ್ ಮಾಡುತ್ತೇವೆಂದು ಹೋರಾಟ ನಿರತರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನ ಹಿಂದೆ ಪಡೆಯಲಾಗಿದೆ.
ಶ್ರೀ ವೀರೇಶ ಸೊಬರದಮಠ ಸ್ವಾಮೀಜಿಗಳು, ಅಶೋಕ ಮಂಕಣಿ , ಬಸವರಾಜ ಕಂಬಳಿ , ಮುತ್ತಣ್ಣ ಮದ್ನೂರ, ಶಿದ್ದಪ್ಪ ಮರೆವಾಡ ,ಬಸು ನಾವಳ್ಳಿ ,ಈರಪ್ಪ ಕೊಪ್ಪದ , ಶಿದ್ದಪ್ಪ ಹದ್ದನ್ನವರ ,ಮಂಜವ್ವ ಕುಸಗಲ್ , ಶೊಬವ್ವ ಕಮತ, ಯಲ್ಲಮ್ಮ ಕುಸುಗಲ್, ವಿಜವ್ವ ಮೊರಬದ , ಶಾಂತವ್ವ ಕಂಬಳಿ, ಸಾವಕ್ಕಾ ಗುಡಿ, ಸರಸ್ವತಿ ಬಾಬನ್ನವರ್, ಶೊಬಾ , ಮುದಕಪ್ಪ ಚಲವಾದಿ , ಶಿದ್ದಪ್ಪ ಹಡಪದ , ಪ್ರಕಾಶ ಪೂಜಾರ, ಮುತ್ತು ಚಿತ್ತರಗಿ , ಮಲ್ಲಿಕಾರ್ಜುನ ತಳವಾರ, ಮೃತ್ಯುಂಜಯ್ಯ ಕುಸುಗಲ್, ಬಸವರಾಜ ಕುಂದಗೊಳ , ಮಲ್ಲಿಕಾರ್ಜುನ ಬೂಮನ್ನವರ , ಶಿದ್ದಯ್ಯ ಸೊಬರದಮಠ , ಕೃಷ್ಣ ಕಾಲವಾಡ, ರಾಮಲಿಂಗಪ್ಪ ಪೂಜಾರ, ಮಹಾಂತೇಶ ಕುಂದಗೊಳ, ರವಿ ಗಡೆನ್ನವರ್ , ಮಹೇಶ ಗೊಕುಲ್, ಬಸು ಕೊಣ್ಣುರ , ಮುತ್ತನ್ನ ಹೊಳೆಸಾಲ, ಮುತ್ತು ಪಾಟೀಲ, ಶಿವು ಕಾಳಿ, ಅಕ್ಷಯ ಚಲವಾದಿ, ವೆಂಕರಡ್ಡಿ ಕಾಮರಡ್ಡಿ , ಅಶೋಕ ವಾಲ್ಮೀಕಿ, ಬರಮಪ್ಪ ಕುರ್ತಕೊಟಿ, ಪ್ರಶಾಂತ ಗಡೆನ್ನವರ್, ಬಿರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.