Posts Slider

Karnataka Voice

Latest Kannada News

ಅಯೋಧ್ಯೆಯಲ್ಲಿ ಶಿವಲಿಂಗ ಸಿಕ್ಕಿದೆ: ಶಿವನ ಮಂದಿರ ನಿರ್ಮಿಸಿ-1008 ಪತ್ರದೊಂದಿಗೆ ಪ್ರಧಾನಿಗೆ ಒತ್ತಾಯ

Spread the love

ಹುಬ್ಬಳ್ಳಿ: ಶ್ರೀರಾಮಮಂದಿರ ವಿನ್ಯಾಸದ ಜಾಗದಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಹೀಗಾಗಿ ಅಲ್ಲಿ ಶಿವ ಮಂದಿರವನ್ನ ಸ್ಥಾಪನೆ ಮಾಡುವಂತೆ 1008 ಪತ್ರವನ್ನ ಬರೆಯಲು ಹುಬ್ಬಳ್ಳಿ ತಾಲ್ಲೂಕು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಘಟಕ ನಿರ್ಧರಿಸಿದೆ.

ಈ ಸಂಬಂಧ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುವ  ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದು, ಅದು ಕೆಳಗಿನಂತಿದೆ…

ಅಯೋಧ್ಯೆಯ  ರಾಮಮಂದಿರ ವಿನ್ಯಾಸದ ಜಾಗದಲ್ಲಿ ಶಿವಲಿಂಗ ಪತ್ತೆಯಾಗಿರುವುದು ತಮಗೆಲ್ಲ ತಿಳಿದಿರುವ ವಿಷಯ. ಹೀಗಾಗಿ ಅಲ್ಲಿ ಶಿವ ಮಂದಿರವನ್ನು ಸ್ಥಾಪನೆ ಮಾಡಲು ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿ  1008 ಪತ್ರಗಳನ್ನು  ಬರೆಯಬೇಕೆಂದು ತೀರ್ಮಾನಿಸಲಾಗಿದೆ. ಅದಕ್ಕಾಗಿ ತಾವು ಒಂದು ಪತ್ರವನ್ನು ಬರೆದು ನಮಗೆ ತಲುಪಿಸಿದಲ್ಲಿ ನಾವು ಅವುಗಳನ್ನು ಸಂಸದೀಯ ಮಂತ್ರಿಗಳ ಸಹಾಯದಿಂದ ಪ್ರಧಾನ ಮಂತ್ರಿಗಳಿಗೆ ತಲುಪಿಸುವ ಯೋಜನೆ ರೂಪಿಸಿಕೊಂಡಿದ್ದೇವೆ. ಕಾರಣ ದಯಮಾಡಿ ತಮ್ಮ ಸ್ವಂತ ಹೆಸರಿನಿಂದ ತಾವು ಒಂದು ಪತ್ರವನ್ನು ಬರೆದು ಕಳುಹಿಸಲು ಈ ಮೂಲಕ ನಾನು ಕೋರಿ ಕೊಳ್ಳುತ್ತಿದ್ದೇವೆ. ದಯಮಾಡಿ ಶೀಘ್ರವೇ ತಕ್ಷಣವೇ ಪತ್ರ ಬರೆದು ತಲುಪಿಸಿ ಪತ್ರವು ಸ್ವಚ್ಛಂದವಾಗಿ ಇರಲಿ ಅಥವಾ ಕಂಪ್ಯೂಟರ್ ಮಾಡಿ ಕಳುಹಿಸಿದರೂ ನಡೆಯುತ್ತದೆ.  ಪ್ರಕಾಶ ಬೆಂಡಿಗೇರಿ-98441 10847, ಅಧ್ಯಕ್ಷರು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹಾಗೂ  ರಜತ್ ಉಳ್ಳಾಗಡ್ಡಿಮಠ – 9845166566, ವೀರಶೈವ – ಲಿಂಗಾಯತ ಸಮಾಜದ ಮುಖಂಡರು ಸಂಪರ್ಕಿಸಬಹುದು.

ಇಂತಿ ತಮ್ಮ

ಪ್ರಕಾಶ ಬೆಂಡಿಗೇರಿ

ಅಧ್ಯಕ್ಷರು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ

ದೇಸಾಯಿ ಓಣಿ

ಬಂಕಾಪುರ ಚೌಕ್ ಹತ್ತಿರ ಹುಬ್ಬಳ್ಳಿ


Spread the love

Leave a Reply

Your email address will not be published. Required fields are marked *