10ಲಕ್ಷದ ಪ್ಯಾಕೇಜ್ ಬಿಟ್ಟು “ಪತ್ರಕರ್ತ”ನಾಗಿರೋ ‘BE’ ಪದವೀಧರನಿಗೆ ಒಲಿದು ಬಂದ “ಉದಯೋನ್ಮುಖ ಪತ್ರಕರ್ತ” ಪ್ರಶಸ್ತಿ…

ಹುಬ್ಬಳ್ಳಿ: ಹಣವನ್ನ ದುಡಿಯಬಹುದು ಆದರೆ, ದುಡಿದ ಹಣ ಮನಸ್ಸಿಗೆ ನೆಮ್ಮದಿಯನ್ನ ಕೊಡುತ್ತಿದೇಯಾ ಎಂದು ಪ್ರಶ್ನಿಸಿಕೊಳ್ಳುವವರ ಸಂಖ್ಯೆ ತೀರಾ ವಿರಳ. ಅಂಥದರಲ್ಲಿ ಬಿಇ ಇಂಜಿನಿಯರ್ ಆಗಿದ್ದ ಯುವಕನೋರ್ವ ಅಮೆರಿಕಾ ಮೂಲದ ಕಂಪನಿಯ ಜೊತೆ ಗೋವಾದಲ್ಲಿ ಸಾಪ್ಟವೇರ್ ಇಂಜಿನಿಯರ್ ಬಿಟ್ಟು, ಪತ್ರಕರ್ತನಾಗುವ ಕನಸು ಕಂಡವನಿಗೆ ಇಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ‘ಉದಯೋನ್ಮುಖ ಪತ್ರಕರ್ತ’ ಪ್ರಶಸ್ತಿ ಘೋಷಣೆ ಮಾಡುವ ರೀತಿಯಲ್ಲಿ ಆತ ಬೆಳೆದು ಮುನ್ನಡೆಯುತ್ತಿದ್ದಾನೆ.
ಹೌದು… ಈ ಬಾರಿ ಯಾರದ್ದೋ ಪ್ರಾಯೋಜಕತ್ವದ ಪ್ರಶಸ್ತಿ ಪಡೆಯುವುದನ್ನ ಮೀರಿ ಸಂಘವೇ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಹಜರೇಸಾಬ ಮೌಲಾಸಾಬ ನದಾಫ ಉದಯೋನ್ಮುಖ ಪ್ರಶಸ್ತಿ ಘೋಷಣೆ ಮಾಡಿದೆ.
ಅಂದ ಹಾಗೇ ಈ ಹಜರೇಸಾಬ ನದಾಫ ನಡೆದು ಬಂದ ದಾರಿ ರೋಚಕವೂ, ಸೋಜಿಗವೂ ಎನಿಸದೇ ಇರದು. ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದ ರೈತಾಪಿ ಕುಟುಂಬದ ಮೌಲಾಸಾಬ ಹಾಗೂ ಜನ್ನತಬಿ ನದಾಫ ಅವರ ಕೊನೆಯ ಮಗನೇ ಈ ಹಜರೇಸಾಬ.
ಒಡಹುಟ್ಟಿದ ಅಕ್ಕ ಕೋರ್ಟಲ್ಲಿ ಕರ್ತವ್ಯ ನಿರ್ವಹಿಸಿದರೇ, ಇಬ್ಬರು ಅಣ್ಣಂದಿರ ಪೈಕಿ ಒಬ್ಬರು ಶಿಕ್ಷಕರಾಗಿಯೂ ಮತ್ತೋರ್ವರು ರೈತರಾಗಿಯೂ ಜೀವನ ನಡೆಸುತ್ತಿದ್ದಾರೆ. ಅಣ್ಣನ ಪತ್ನಿ ನರ್ಸ್ ಆಗಿದ್ದು, ಪತ್ರಕರ್ತ ಹಜರೇಸಾಬ ಅವರ ಮಡದಿ ಕೂಡಾ ಮೊರಾರ್ಜಿ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐದು ವರ್ಷದ ಮಗ, ಮೂರು ವರ್ಷದ ಮಗಳಿದ್ದಾರೆ.
ಮನೆಯಲ್ಲಿ ಕೊನೆಯ ಮಗನಾಗಿದ್ದ ಹಜರೇಸಾಬ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಸಾಫ್ಟ್‌ವೇರ್ ಇಂಜಿನಿಯರ್ ಆಗಲಿ ಎಂದು ಚೆನ್ನಾಗಿಯೇ ಓದಿಸಿದ್ದರು. ಮನೆಯವರ ಒಲವನ್ನ ಡಿಪ್ಲೋಮಾ ಮತ್ತು ಬಿಇಯನ್ನ ಅತ್ಯುತ್ತಮ ತರಗತಿಯಲ್ಲಿ ತೇರ್ಗಡೆಯಾಗಿ ನೌಕರಿಯನ್ನೂ ಪಡೆದಿದ್ದ. ಆದರೆ, ಈ ಮಾಯಾವಿ ಮಾಧ್ಯಮ ಇವರನ್ನ ತನ್ನತ್ತ ಸೆಳೆದಿತ್ತು.
ಗೋವಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಪತ್ರಕರ್ತನಾಗುವ ಕನಸು ಹೊತ್ತು ಬೆಂಗಳೂರಿಗೆ ಹೋದಾಗ ಸಮಯದ ಬಾಗಿಲು ತೆರೆಯಲು ಶ್ರೀನಿವಾಸ ಹಳಕಟ್ಟಿ, ರಾಚಪ್ಪ ಸುತ್ತೂರ ಹಾಗೂ ಅರುಣಕುಮಾರ ಅವರ ವರದಿಗಾರಿಕೆಯ ಈತನಿಗೆ ಜೀವಾಳವಾಗತ್ತೆ. ಓಬಿ ಇಂಜಿನಿಯರ್ ಪತ್ರಕರ್ತನಾಗುವ ಕನಸಿಗೆ ಈ ಮೂವರು ಮತ್ತಷ್ಟು ಪ್ರೇರಣೆಯಾಗ್ತಾರೆ.
ಇದಾದ ನಂತರ ಹಿರಿಯ ಪತ್ರಕರ್ತರಾದ ಸಮ್ಮಿವುಲ್ಲಾ ಅವರ ಹಿರಿತನದಲ್ಲಿ ಆರಂಭಗೊಂಡಿದ್ದ ಸ್ವರಾಜ್ ಚಾನಲ್‌ನಲ್ಲಿ ಬಾಲರಾಜ್ ಎನ್ನುವವರು ಸಂದರ್ಶನ ತೆಗೆದುಕೊಂಡು ಇನ್‌ಫುಟ್‌ಗೆ ಆಯ್ಕೆಯಾಗ್ತಾರೆ. ಆ ಚಾನಲ್ ಮುಂದುವರೆಯಲ್ಲ ಎಂದು ಗೊತ್ತಾದ ಹುಬ್ಬಳ್ಳಿಗೆ ಬಂದು ಬಿಗ್‌ನ್ಯೂಸ್‌ನಲ್ಲಿ ಹಲವು ಪ್ರಯೋಗಗಳನ್ನ ಮಾಡಿ ಸಕ್ಸಸ್ ಆಗ್ತಾರೆ.
ಇದಾದ ನಂತರ ಮತ್ತೆ ಬೆಂಗಳೂರಿಗೆ ಹೋಗಿ ಚಾನಲ್‌ನಲ್ಲಿ ಕಾಫಿ ಎಡಿಟರ್ ಆಗಲು ಹೊರಟವರಿಗೆ ಕೈ ಬೀಸಿ ಕರೆದಿದ್ದು ವಾರ್ತಾಭಾರತಿ ಎಂಬ ಜನಪ್ರಿಯ ಸಂಸ್ಥೆ. ಕಳೆದ ಹದಿನೆಂಟು ತಿಂಗಳಿಂದ ಧಾರವಾಡ, ಹಾವೇರಿ, ಶಿವಮೊಗ್ಗ, ಗದಗ, ಹಾವೇರಿ ಸೇರಿದಂತೆ ಹಲವು ಭಾಗಗಳಿಗೆ ಹೋಗಿ ಉತ್ತಮವಾದ ವರದಿಗಳನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ ಹಜರೇಸಾಬ ನದಾಫ.
ಸಂಪಾದನೆ ಮಾಡುವುದಕ್ಕೆ ಹಲವು ದಾರಿಗಳಿರಬಹುದು, ಆದರೆ ನೆಮ್ಮದಿ ಸಿಗುವ ಜಾಗದಲ್ಲಿ ದುಡಿದು ತಿನ್ನಬೇಕು ಎಂದು ಹೊರಟ ಪತ್ರಕರ್ತ ಹಜರೇಸಾಬ ನದಾಫಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉದಯೋನ್ಮುಖ ಪತ್ರಕರ್ತ ಪ್ರಶಸ್ತಿ ನೀಡಿದ್ದು ಶ್ಲಾಘನೀಯವಾಗಿದೆ.
ಜಾತ್ಯಾತೀತ ಮನೋಭಾವನೆ ಹೊಂದಿರುವ ಮನಸ್ಸುಗಳಿಗೆ ಈ ಹಜರೇಸಾಬ ನದಾಫ ಮಾದರಿಯಾಗಲಿ.