ASI ನಾಭಿರಾಜ್ ಸಾವು- ಜಂಡು ಕನ್ಸಟ್ರಕ್ಷನ್‌ದ ಇಂಜಿನಿಯರ್‌ಗಳು ಸೇರಿ 11 ಜನರ ಬಂಧನ…
1 min readಹುಬ್ಬಳ್ಳಿ: ಉಪನಗರ ಪೊಲೀಸ ಠಾಣೆಯ ಎಎಸ್ಐಯಾಗಿದ್ದ ನಾಭಿರಾಜ ಜಯಪಾಲ ದಯಣ್ಣವರ ಕರ್ತವ್ಯದ ಮೇಲೆ ಬೈಕಿನಲ್ಲಿ ಹುಬ್ಬಳ್ಳಿ ಹಳೇ ಕೋರ್ಟ ವೃತ್ತದ ಬಳಿ ಹೋಗುತ್ತಿದ್ದಾಗ ನಿರ್ಮಾಣ ಹಂತದಲ್ಲಿರುವ ಮೇಲ್ ಸೇತುವೆ ಕಾಮಗಾರಿಯನ್ನು ಮಾಡುತ್ತಿರುವ ಜಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದುದರಿಂದ ಸೇತುವೆ ಮೇಲೆ ಕಬ್ಬಿಣದ ಬಾರಗಳನ್ನು ಸಾಗಿಸುತ್ತಿದ್ದ ನೌಕರರ ನಿರ್ಲಕ್ಷತನದಿಂದ ಕಬ್ಬಿಣದ ಪೈಪ್ ಎ.ಎಸ್.ಐ ಅವರ ತಲೆಯ ಮೇಲೆ ಬಿದ್ದು ಅವರ ಹೆಲ್ಮೆಟ್ ಒಡೆದು ತಲೆಗೆ ಬಲವಾದ ಗಾಯವಾಗಿ ಅವರಿಗೆ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರಿಂದ ಈ ಘಟನೆಗೆ ಸಂಬಂಧಪಟ್ಟಂತೆ ಜಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಂಪನಿಯ ಸೂಪರ್‌ವೈಜರ್ ಹರ್ಷಾ ಶಿವಾನಂದ ಹೊಸಗಾಣಿಗೇರ, ಲೈಜನಿಂಗ್ ಇಂಜಿನಿಯರ್ ಜಿತೇಂದ್ರಪಾಲ ಶರ್ಮಾ ಶ್ರೀ ದೇವಕೃಷ್ಣ, ಇಂಜಿನಿಯರ್ ಭೂಪೇಂದರ್ ಪಾಲ್ ಮಹಾರಾಜಸಿಂಗ್, ನೌಕರುಗಳಾದ ಮೊಹಮ್ಮದ ಇಮಾದರೂ ಸಹರುಲ್ ಮಿಯಾ, ಕ್ರೇನ್ ಚಾಲಕ ಅಸ್ಲಂ ಅಲಿ ಜಲೀಲಮಿಯಾ, ನೌಕರ ಮೊಹಮ್ಮದ ಮಸೂದರ ರೆಹಮಾನ ಮೆಹಮೂದ್ದೀನ ಹಾಜಿ, ನೌಕರ ಸಬೀಬ ಶೇಖ ಮನ್ಸೂರಾಲಿ, ನೌಕರ ರಿಜಾವುಲ್ ಹಕ್ ಮಂಜೂರಾಲಿ, ಶಮೀಮ್ ಶೇಖ ಪಿಂಟು ಶೇಖ, ಮೊಹಮ್ಮದ ಆರೀಫ ಖಯಮ, ಲೇಬರ್ ಕಾಂಟ್ರ್ಯಾಕ್ಟರ್ ಮೊಹಮ್ಮದ ರಬಿವುಲ್ ಹಕ್ ಮಜಬೂರ ರಹಿಮಾನ ಬಂಧಿಸಲಾಗಿದೆ.