“ಗೋಕಾಕ ದುರ್ಗಾದೇವಿ ಜಾತ್ರೆ” ಬಂದೋಬಸ್ತ್‌ಗೆ ಹೋಗಿದ್ದ 94 ಬ್ಯಾಚಿನ ಹುಬ್ಬಳ್ಳಿ APMC ಠಾಣೆಯ ಎಎಸ್ಐ ಲಾಲಸಾಬ…

ಹುಬ್ಬಳ್ಳಿ: ನವನಗರದ ಎಪಿಎಂಸಿ ಠಾಣೆಯ ಎಎಸ್ಐವೊಬ್ಬರು ಗೋಕಾಕನಲ್ಲಿನ ದುರ್ಗಾದೇವಿ ಜಾತ್ರೆಗೆ ಬಂದೋಬಸ್ತ್‌ಗೆ ತೆರಳಿದ ಸಮಯದಲ್ಲಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ.
ಲಾಲಸಾಬ ಮೀರಾನಾಯಕ ಎಂಬುವವರೇ ಸಾವಿಗೀಡಾದ ಎಎಸ್ಐಯಾಗಿದ್ದು, 1994 ರಲ್ಲಿ ಸಿವಿಲ್ ಪೊಲೀಸ್‌ರಾಗಿ ಆಯ್ಕೆಗೊಂಡಿದ್ದರು. ಮೂಲತಃ ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಲಾಲಸಾಬ ಅವರಿಗೆ ಎರಡು ಗಂಡು ಮಕ್ಕಳಿದ್ದಾರೆ.
ಚೆನ್ನಪಟ್ಟಣದಲ್ಲಿ ತರಬೇತಿ ಪಡೆದ ನಂತರ ಅವಳಿನಗರದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಲಾಲಸಾಬ ಮೀರಾನಾಯಕ ಅವರ ನಿಧನದ ಸುದ್ದಿ ಅವರ ಬ್ಯಾಚಿಮೆಂಟಿನಲ್ಲಿ ತೀವ್ರ ಬೇಸರ ಮೂಡಿಸಿದೆ.