ಕೊರೋನಾಗೆ ಎಎಸ್ಐ ಹಾಗೂ ಪೊಲೀಸ್ ಬಲಿ: ತಲ್ಲಣಗೊಂಡ ಇಲಾಖೆ
ಸಂಕೇಶ್ವರ/ಬೆಂಗಳೂರು: ಕೊರೋನಾ ವಾರಿಯರ್ಸ್ ಪೊಲೀಸರು ಕೋವಿಡ-19 ಮಹಾಮಾರಿಗೆ ಬಲಿಯಾಗುತ್ತಲಿದ್ದಾರೆ. ಇಂದು ಬೆಳಗಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾಲಕ್ಷ್ಮೀ ಲೇಔಟ್ ಠಾಣೆಯ ಎಎಸ್ ಐ ಹಾಗೂ ಸಂಕೇಶ್ವರ ಪೊಲೀಸ್ ಠಾಣೆಯ ಪೇದೆಯೋರ್ವರು ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ಎಎಸ್ಐ ಪರಮೇಶ್ವರಯ್ಯ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಕಳೆದ ಕೆಲ ದಿನಗಳಿಂದ ಕೊರೋನಾದಿಂದ ಬಳಲುತ್ತಿದ್ದರು.
ಕೊರೋನಾ ಪಾಸಿಟಿವ್ ದೃಢಪಟ್ಟ ಕೂಡಲೇ ಅವರನ್ನು ಕಳೆದ ತಿಂಗಳ 26ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಬೆಳಗಿನ ಜಾವ 2.30 ಕ್ಕೆ ಎಎಸ್ ಐ ಪರಮೇಶ್ವರಯ್ಯ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಪರಮೇಶ್ವರಯ್ಯ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರ ಗುಂಡು ಮದಾನೆ ಕೂಡಾ ಕೊರೋನಾಗೆ ಬಲಿಯಾಗಿದ್ದಾರೆ. ರವೀಂದ್ರರ ಸಾವಿನಿಂದ ಇಲಾಖೆಯಲ್ಲಿ ಬೇಸರ ಮೂಡಿಸಿದ್ದು, ಕೊರೋನಾ ವಾರಿಯರ್ಸ್ ಕೂಡಾ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ.
ಕೊರೋನಾ ಹಿನ್ನೆಲೆ ಸಾವಿರಾರು ಪೊಲೀಸರು ಸೋಂಕಿಗೆ ಒಳಗಾಗುತ್ತಿದ್ದಾರೆ. ಸಾರ್ವಜನಿಕ ರಕ್ಷಣೆಗೆ ನಿಂತ ಪೊಲೀಸರು ಕೊರೋನಾ ವೈರಸ್ ಗೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವಾಗ ಕೊರೋನಾ ತಗುಲಿ ಸಾವನ್ನಪ್ಪುತ್ತಿದ್ದಾರೆ. 50 ವರ್ಷ ಮೇಲ್ಪಟ್ಟ ಪೊಲೀಸರಿಗೆ ಸುದೀರ್ಘ ರಜೆ ನೀಡಬೇಕಾಗಿದೆ. ಇಲ್ಲವಾದಲ್ಲಿ ಕರ್ತವ್ಯ ನಿರ್ವಹಿಸುವಾಗಲೇ ಮತ್ತಷ್ಟು ಮಂದಿ ಕೊರೋನಾಗೆ ಬಲಿಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಇತ್ತ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.