ಒಂದೇ ವಾರದಲ್ಲಿ “94” ಬ್ಯಾಚಿನ ಇಬ್ಬರು ಎಎಸ್‌ಐಗಳ ಸಾವು…
1 min readಹುಬ್ಬಳ್ಳಿ: ನಂಬಿಕೆಗೆ ಕರ್ತವ್ಯಕ್ಕೆ ಹುಬ್ಬಳ್ಳಿ ಧಾರವಾಡ ಕಮೀಷನರೇಟಿನಲ್ಲಿ ಹೆಸರು ಉಳಿಸಿಕೊಂಡಿರುವ ಪ್ರಮುಖವಾದ ‘1994’ ಬ್ಯಾಚಿನ ಇಬ್ಬರು ಎಎಸ್ಐಗಳು ಸಾವಿಗೀಡಾಗಿದ್ದು, ಇಲಾಖೆಯಲ್ಲಿ ಕಣ್ಣೀರಿಡುವ ಜೊತೆಗೆ ಜಾಗೃತೆಯ ಗಂಟೆ ಹೊಡೆದಂತಾಗಿದೆ.
ಹೌದು.. ಪೊಲೀಸರ ನಿರಂತರವಾಗಿ ಕರ್ತವ್ಯದ ಒತ್ತಡದಲ್ಲಿ ಜೀವ ಕಳೆದುಕೊಳ್ಳುತ್ತಿರುವುದಕ್ಕೆ ಮದ್ಯ ಸೇವನೆ ಹೆಚ್ಚಾಗಿರುವುದೇ ಕಾರಣವೆಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ಐವತ್ತರ ಆಸುಪಾಸಿನ ಆರಕ್ಷಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂಬ ಮಾಹಿತಿಯಿದೆ.
ಶಹರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ ರುಬ್ದಿ ಇಂದು ಅನಾರೋಗ್ಯದಿಂದ ಸಾವಿಗೀಡಾಗಿದ್ದು, ಕಳೆದ ಐದು ದಿನಗಳ ಹಿಂದೆ ಇವರದ್ದೆ ಬ್ಯಾಚಿನ ಪಿ.ಎಸ್.ಮುಳ್ಳೊಳ್ಳಿ ಕೂಡಾ ಅನಾರೋಗ್ಯದಿಂದ ಪ್ರಾಣವನ್ನ ಕಳೆದುಕೊಂಡಿದ್ದಾರೆ.
ಜನರ ನೆಮ್ಮದಿಯನ್ನ ಕಾಪಾಡುವ ಉದ್ದೇಶದಿಂದ ಹಗಲಿರುಳು ದುಡಿಯುವ ಪೊಲೀಸರು ಸಾಧ್ಯವಾದಷ್ಟು ‘ಚಟ’ಗಳಿಂದ ದೂರವಿರುವ ಅವಶ್ಯಕತೆಯಿದೆ. ಇಲಾಖೆಯಲ್ಲಿ ಜೀವ ಹೋದ ಮೇಲೆ ಲಕ್ಷಾಂತರ ರೂಪಾಯಿ ಬರತ್ತೆ, ಆದರೆ, ಉಳಿದ ಜೀವಗಳು ನಿರಂತರವಾಗಿ ಕಣ್ಣೀರಿನಲ್ಲಿ ಕೈತೊಳೆಯಬೇಕಾಗತ್ತೆ ಎಂಬುದನ್ನ ದಯವಿಟ್ಟು ಪ್ರತಿ ಪೊಲೀಸರು ಅರ್ಥ ಮಾಡಿಕೊಳ್ಳಬೇಕಿದೆ.