ಡ್ಯೂಟಿಗೆ ಹೊರಟಿದ್ದ ಎಎಸೈ ದುರ್ಮರಣ: ಉದ್ದೇಶಪೂರ್ವಕ ಘಟನೆ..?

ಬೆಳಗಾವಿ: ನೈಟ್ ಡ್ಯೂಟಿ ಮಾಡಲು ಹೊರಟಿದ್ದ ಪಿಎಸೈಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಧಿಕಾರಿ ಸಾವನ್ನಪ್ಪಿದ ಘಟನೆ ಸವದತ್ತಿ ಸಮೀಪ ನಡೆದಿದೆ.
ಸವದತ್ತಿ ಪೊಲೀಸ್ ಠಾಣೆಯಿಂದ ರಾತ್ರಿ ಪಾಳಿಯ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ವೈ.ಆರ್.ತಳವಾರಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಸಾವೀಗಿಡಾಗಿದ್ದಾರೆ. ನಿವೃತ್ತಿ ಅಂಚಿನಲ್ಲಿದ್ದ ಎಎಸ್‌ಐ, ಕೊರೋನಾ ವೈರಸ್ ರಾತ್ರಿ ಪಾಳಯಕ್ಕಾಗಿ ಅಸುಂಡಿಗೆ ಹೊರಟಿದ್ದರು. ಸವದತ್ತಿ ಠಾಣೆಯಲ್ಲೇ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನಕ್ಕಾಗಿ ಶೋಧ ನಡೆದಿದೆ. ಸಾವಿನ ಹಿಂದೆ ಬೇರೆ ಏನಾದರೂ ಕಾರಣಗಳಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.