ಹುಬ್ಬಳ್ಳಿಯಲ್ಲಿ ಎಎಸ್ಐ ಬೈಕಿಗೆ ಡಿಕ್ಕಿ- ಅಧಿಕಾರಿಗೆ ತೀವ್ರ ಗಾಯ: ಸವಾರ ಪರಾರಿ…!

ಹುಬ್ಬಳ್ಳಿ: ಕರ್ತವ್ಯ ಮುಗಿಸಿ ಹೋಗುತ್ತಿದ್ದ ASI ರೊಬ್ಬರಿಗೆ ಬೈಕ್ ಸವಾರನೊಬ್ಬ ಗುದ್ದಿಕೊಂಡು ಹೋದ ಪರಿಣಾಮ ASI ತಲೆಗೆ ಗಂಭೀರವಾದ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಗೋಕುಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಕ್ಕೀರಪ್ಪ ತಡಸಿ ಎಂಬ ASI ಕರ್ತವ್ಯ ನಿರ್ವಹಿಸಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ರಾಮಲಿಂಗನಗರದ 17 ವರ್ಷದ ಗೌತಮ ಎಂಬ ಯುವಕ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ASI ಹೋಗುತ್ತಿದ್ದ ಬೈಕ್ ಗೇ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ತಲೆಗೆ ಗಂಭೀರವಾಗಿ ಗಾಯಗೊಂಡ ASI ತಡಸಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪರಾರಿಯಾಗಿರುವ ಬೈಕ್ ಸವಾರನ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.