ದೇವರ ಬಳಿ ಹೊರಟು ನಿಂತ ದೇವರಂಥ ಮನುಷ್ಯ: ವಿ ಆಲ್ ಮಿಸ್ ಯೂ ಸರ್
ಧಾರವಾಡ: ಅವರು ಎಲ್ಲ ತಂದೆಯಂತೆ ಇರಲೇ ಇಲ್ಲ. ಮಗನೊಂದಿಗೆ ಗೆಳೆಯನಾಗಿಯೂ, ಖಾಲಿ ಜಾಗದಲ್ಲಿ ರೈತನಾಗಿಯೂ, ಅಡುಗೆ ಮನೆಯಲ್ಲಿ ಮಾಸ್ಟರ್ ಷೆಪ್ಪನಾಗಿಯೂ, ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿಯೂ ಇದ್ದವರೇ.. ಅವರಿವತ್ತು ಸಡನ್ನಾಗಿ ಹೊರಟು ನಿಂತಿದ್ದಾರೆ.
ಹಾಗೇ ಹೊರಟು ನಿಂತವರೇ ಧಾರವಾಡ ರಜತಗಿರಿಯ ನಿವಾಸಿ ಅಶೋಕ ತಲವಾಯಿ. ಬ್ಯಾಂಕ್ ಮ್ಯಾನೇಜರ್ ಆಗಿದ್ದ ಇವರ ಇಬ್ಬರು ಪುತ್ರರ ಪೈಕಿ ಒಬ್ಬಾತ ದೀಪಕ ತಲವಾಯಿ, ವಿಜಯವಾಣಿಯಲ್ಲಿ ಹಿರಿಯ ಉಪಸಂಪಾದಕ. ಅಶೋಕ ತಲವಾಯಿಯವರು ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ.
ಅಶೋಕ ತಲವಾಯಿ ಅವರು ಯಾವತ್ತೂ ನಿವೃತ್ತಿಯಾಗಿದ್ದೇನೆ ಅಂದುಕೊಳ್ಳಲೇಯಿಲ್ಲ. ಹಾಗಾಗಿಯೇ ಮನೆಯಲ್ಲೇ ಎಲ್ಲವೂ ಆಗಿದ್ದರು. ಅಷ್ಟೇ ಅಲ್ಲ, ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಅಲ್ಲಿಯೂ ಉತ್ಸಾಹದಿಂದ ಇದ್ದವರು.
ಇಂತಹ ದೇವರಂತ ಮನುಷ್ಯ ದೇವರ ಬಳಿ ಹೊರಟು ಹೋಗಿದ್ದಾರೆ. ಅವರಿಲ್ಲಾ ಅನ್ನೋ ಮನೋಭಾವನೆಯಿಂದ ಮನೆಯವರು ಹೊರಗೆ ಬರಲಿ. ಅಶೋಕ ತಲವಾಯಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರನ್ನ ಬಲ್ಲವರೆಲ್ಲರೂ ಪ್ರಾರ್ಥಿಸಿದ್ದಾರೆ. ಪತ್ರಕರ್ತ ದೀಪಕ ತಲವಾಯಿಗೂ ಈ ನೋವನ್ನ ಭರಿಸುವ ಶಕ್ತಿಯನ್ನ ಭಗವಂತ ನೀಡಲಿ..