ಬಾರ್-ರೆಸ್ಟೋರೆಂಟ್ ಓಪನ್ ಸಧ್ಯಕ್ಕಿಲ್ಲ ಬಾಸ್: ಸಚಿವರ ಉವಾಚ

ಬೆಂಗಳೂರು: ಲಾಕ್ ಡೌನ್ ಫ್ರೀಗೆ ಸರ್ಕಾರ ಮುಕ್ತ ಮನಸ್ಸಿನಿಂದ ಇದೆ. ಕೊರೋನಾ ಜತೆ ಬದುಕುವುದು ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿದ್ದೇವೆ. ಹೋಟೆಲ್ ಗಳು ಒಪನ್ ಆಗಬಹುದು. ಆದ್ರೆ, ಬಾರ್ ಆಂಡ್ ರೆಸ್ಟೋರೆಂಟ್ ಒಪನ್ ಸದ್ಯಕ್ಕೆ ಮಾಡಲ್ಲ. ಕುಡಿದ್ರೆ ಗಲಾಟೆಗಳು ಆಗಬಹುದು ಎಂದು ಸಚಿವ ಆರ್ ಅಶೋಕ ಹೇಳಿದರು.
ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿದೆ. ಖಾಯಿಲೆ ಗುಣ ಪಡಿಸುವುದಕ್ಕೂ ಒತ್ತು ನೀಡ್ತೇವೆ. ಜೂನ್ 1ರ ನಂತರ ಕೇಂದ್ರದ ನಿರ್ದೇಶನ ನೋಡ್ತೇವೆ. ನಂತರ ಹೊಟೇಲ್ ಪ್ರಾರಂಭಕ್ಕೆ ಅವಕಾಶ ಎಂದು ಸಚಿವ ಆರ್.ಅಶೋಕ್ ಹೇಳಿದ್ರು.