ಬಿಜೆಪಿ ಶಹರ ಘಟಕದ ವಕ್ತಾರ ಹೃದಯಾಘಾತದಿಂದ ಸಾವು..

ಧಾರವಾಡ: ಕಲಬುರಗಿ ಬಿಜೆಪಿ ಶಹರ ಘಟಕದ ವಕ್ತಾರರಾಗಿದ್ದ ಅರುಣ ಕುಲಕರ್ಣಿ ಅವರು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಬೆಳಗಿನ ಜಾವ ನಿಧನರಾಗಿದ್ದಾರೆ.

ಅರುಣ ಕುಲಕರ್ಣಿಯವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ. ಮಧ್ಯಾಹ್ನದ ಬಳಿಕ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಅವರ ಸಹೋದರ ರವಿ ಕುಲಕರ್ಣಿ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದ ಅರುಣ ಅವರು, ತಮ್ಮ ದೇಹವನ್ನ ದಾನ ಮಾಡಿದ್ದರು.