ಕಂಡ ಕಂಡಲ್ಲಿ ಉಗುಳಿ, ಅನುಮಾನಸ್ಪದ ತಿರುಗಾಟ ಐವರು ಯುವಕರ ಬಂಧನ

ಮೈಸೂರು: ಬೆಳ್ಳಂಬೆಳಿಗ್ಗೆ ಅನುಮಾನಾಸ್ಪದವಾಗಿ ಕಂಡ ಕಂಡಲ್ಲಿ ಉಗುಳುತ್ತ ತಿರುಗುತ್ತಿದ್ದ ಐವರು ಯುವಕರನ್ನ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಟೆನಿಸ್ ಕ್ಲಬ್ ಎದುರು ಕಾರು ನಿಲ್ಲಿಸಿ ಅನುಮಾನಾಸ್ಪದ ನಡುವಳಿಕೆ ಮಾಡುತ್ತಿದ್ದ ಯುವಕರು. ರಸ್ತೆಯಲ್ಲಿ ಉಗುಳುತ್ತಿದ್ದರಿಂದ ಜನರೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರನ್ನ ಬಂಧಿಸಿ ಕರೆದುಕೊಂಡು ಠಾಣೆಗೆ ಹೋಗಿದ್ದು, ತನಿಖೆ ಮುಂದುವರೆದಿದೆ.