Posts Slider

Karnataka Voice

Latest Kannada News

ಧಾರವಾಡದಲ್ಲಿ “ಸೋಗು-ಲೂಟಿ”-ಬುರ್ಖಾಧಾರಿ ಬಂಧಿಸಿದ “ಟೌನ್ ಠಾಣೆ” ಪೊಲೀಸರು…

1 min read
Spread the love

ಧಾರವಾಡ: ಗ್ರಾಹಕರ ಸೋಗಿನಲ್ಲಿ ಬಂದು ಗಮನ ಬೇರೆ ಕಡೆ ಸೆಳೆದು ಬಂಗಾರದ ಆಭರಣ ಕಳ್ಳತನ ಮಾಡಿದ ಮಹಿಳಾ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಜನೇವರಿ 01, 2024 ರಂದು ಧಾರವಾಡ ಶಹರ ಪೊಲೀಸ ಠಾಣೆ ವ್ಯಾಪ್ತಿಯ ಸುಭಾಸ ರಸ್ತೆಯಲ್ಲಿರುವ ಬಾಂಬೆ ರಸ್ಟೋರಂಟ್ ಎದುರಿಗೆ 42 ವರ್ಷದ ವ್ಯಾಪಾರಿ ಸುನೀಲ ತಂದೆ ಮಹಾಬಳೇಶ್ವರ ರಾಯ್ಕರ ಮಾಲಿಕತ್ವದ “ಎಂ.ಎಸ್. ರಾಯ್ಕರ, ಜುವೆಲರ್ಸ” ಅನ್ನುವ ಹೆಸರಿನ ಬಂಗಾರದ ಅಂಗಡಿಗೆ ರಾತ್ರಿ 07.00 ಗಂಟೆಯ ಸುಮಾರಿಗೆ ವ್ಯಾನಿಟಿ ಬ್ಯಾಗನ್ನು ಹಾಕಿಕೊಂಡು ಬುರ್ಖಾ ಧರಿಸಿ ಬಂದು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದಳು.

ಆರೋಪಿಯನ್ನ ಧಾರವಾಡದ ಯಾಸೀನ್ ಶಕೀಲ್ ಶೇಖ ಎಂದು ಗುರುತಿಸಲಾಗಿದೆ.

30 ವಯಸ್ಸಿನ ಅಪಲಿತ ಒಂದು ಮಹಿಳೆಯು 1) ಕೇರಳಾ ಮಾಟನ 12 ಗ್ರಾಂ ತೂಕದ ಒಂದು ಜೈನ ಅ.6: 66,000/- ರೂ 2) ರೂಪ್ ಜೈನ್ 7 ಗ್ರಾಂ ತೂಕದ ಒಂದು ಜೈನ ಅ.6: 38,500/- ರೂ ಹೀಗೆ ಒಟ್ಟು ಭೂಮಾರು 19 ಗ್ರಾಂ ತೂಕದ ಅಂದಾಜು 1,04,500/- ರೂ ಕಿಮ್ಮತ್ತಿನ ಎರಡು ಬಂಗಾರದ ಚೈನ್‌ಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತಳನ್ನು ಬಂಧಿಸಲಾಗಿದೆ.

ಬಂಗಾರದ ಜೈನಗಳನ್ನು ಜಪ್ತ ಮಾಡಲಾಗಿದೆ. ಇರುತ್ತದೆ. ಪೊಲೀಸ್ ಕಮೀಷನರ್ ರೇಣುಕಾ ಕ ಸುಕುಮಾರ, ಡಿಸಿಪಿ ರಾಜೀವ ಎಂ.ಡಿ, ರವೀಶ್ ಪಿ ಆರ್. ಡಿ.ಸಿ.ಪಿ (ಅವಸಂ) ಹಾಗೂ ಎಸಿಪಿ ಪ್ರಶಾಂತ ಸಿದ್ಧನಗೌಡರ ಮಾರ್ಗದರ್ಶನದಲ್ಲಿ ಧಾರವಾಡ ಶಹರ ಪೊಲೀಸ ಠಾಣೆಯ ಎನ್.ಸಿ.ಕಾಡದೇವರ ಪೊಲೀಸ್ ಇನ್ಸಪೆಕ್ಟರ, ಚಂದ್ರಶೇಖರ ಮದರಖಂಡಿ ಪಿ.ಎಸ್.ಐ, ಸ್ವಾತಿ ಮುರಾಲಿ ಪಿ.ಎಸ್.ಐ ಸಿಬ್ಬಂದಿ ಜನರಾದ ಡಿ.ವಿ.ತಾಳರೆಡ್ಡಿ ಸಿಹೆಚ್‌-1421, ಎಂ.ಟಿ.ಗದ್ದಿಕೇರಿ ಸಿಹಚ್‌-1573, ಎನ್.ಹೆಚ್.ಗುಡಿಮನಿ ಸಿಹೆಚ್‌ಸಿ-1605, ಜಿ.ಜಿ.ಚಿಕ್ಕಮಠ ಸಿಹೆಚ್-1509, ಐ.ಪಿ ಬುರ್ಜಿ ಸಿಹೆಚ್‌ಸಿ- 1828, ಪಿ.ಎಸ್.ತಿರ್ಲಾಪೂರ ಸಿಪಿಸಿ-3104, ಎನ್.ಎಸ್.ಬೆಳವಡಿ ಸಿಪಿಸಿ-2823, ಶ್ರೀಧರ.ವಿ.ವಡ್ಡರ ಪಿಪಿಸಿ-3141 ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಪೊಲೀಸ್ ಕಮೀಷನರ್ ರೇಣುಕಾ.ಕೆ. ಸುಕುಮಾರ ಕಾರ್ಯವನ್ನ ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.


Spread the love

Leave a Reply

Your email address will not be published. Required fields are marked *