Posts Slider

Karnataka Voice

Latest Kannada News

‘ಕಬ್ಬಿ`ನಲ್ಲಿ 20ಲಕ್ಷ ರೂಪಾಯಿ ‘ಗಾಂಜಾ’- ತಂದೆ-ಮಗ ಬಂಧನ- ಇನ್ನಿಬ್ಬರು ನಾಪತ್ತೆ

1 min read
Spread the love

ವಿಜಯಪುರ: ಸಕ್ಕರೆಯಾಗುವ ಕಬ್ಬಿನ ಹೊಲದಲ್ಲಿ ನಸೆಯೇರಿಸುವ ಗಾಂಜಾ ಬೆಳೆದು ಹಣ ಮಾಡುವ ಕನಸು ಕಂಡವರಿಗೆ ನನಸ ಮಾಡಲು ಬಿಡದಂತೆ ಪೊಲೀಸರು ಜಾಲ ಬೀಸಿದ್ದು, ಬರೋಬ್ಬರಿ 13 ಲಕ್ಷ ರೂಪಾಯಿ ಮೌಲ್ಯದ ಹಸಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.

ವಿಜಯಪುರ ಅಬಕಾರಿ ಪೊಲೀಸರ ಕಾರ್ಯಾಚರಣೆಯಿಂದ 13ಲಕ್ಷ ಮೌಲ್ಯದ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ 130 ಕೆಜಿಗೂ ಅಧಿಕ ಗಾಂಜಾವನ್ನ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಕಂಡಕಿ ಗ್ರಾಮದ ಜಮೀನಿನಲ್ಲಿ ಬೆಳಕಿಗೆ ಬಂದಿದೆ. ಗಾಂಜಾ ಬೆಳೆದಿದ್ದ ಮಹಾದೇವ ನೀಲಜಗಿ, ಗಂಗಪ್ಪ ನೀಲಜಗಿ ಪೊಲೀಸರು ದಾಳಿ ಮಾಡುತ್ತಿದ್ದಾರೆಂದು ಗೊತ್ತಾದ ತಕ್ಷಣವೇ ಪರಾರಿಯಾಗಿದ್ದಾರೆ.

ಇಬ್ಬರು ಆರೋಪಿಗಳ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದವರಾಗಿದ್ದು, ತಮ್ಮ ಜಮೀನಿರುವ ಕಾಕಂಡಕಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದಿದ್ದರು. ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತೊಂದೆಡೆ ತಂದೆ ಮತ್ತು ಮಗು ಕೂಡಿಕೊಂಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಹೊಲದಲ್ಲಿ ಬೆಳೆದಿದ್ದ 46 ಕೆಜಿ ಹಸಿ ಗಾಂಜಾ ಹಾಗೂ 3 ಕೆಜಿ ಒಣ ಗಾಂಜಾ ಸೇರಿದಂತೆ ಒಟ್ಟು 49 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಇನ್ನು ತಂದೆ ಅರವಿಂದ ಮಾದರಿ 54, ಮಗ ಪ್ರವೀಣ ಮಾದರಿ ಆರೋಪಿಗಳನ್ನು ಸಿಂದಗಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ವಿಜಯಪುರದ ಜಿಲ್ಲೆಯಲ್ಲಿ ಇದು ಮೂರನೇಯ ಪ್ರಕರಣವಾಗಿದ್ದು, ಜಮೀನಿನಲ್ಲೇ ಗಾಂಜಾ ಬೆಳೆಯುತ್ತಿದ್ದ ಪ್ರಕರಣಗಳು ಹೊರ ಬರುತ್ತಿವೆ. ಇನ್ನೂ ಹಲವು ಜಮೀನುಗಳಲ್ಲಿ ಗಾಂಜಾ ಬೆಳೆದಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆದಿದೆ.


Spread the love

Leave a Reply

Your email address will not be published. Required fields are marked *