87ಕೆಜಿ ಹಸಿ ಗಾಂಜಾ ಜಪ್ತಿ: ವ್ಯವಸಾಯವನ್ನೇ ಮಾಡಿದ್ದ ಖದೀಮರು ಅಂದರ್
1 min readವಿಜಯಪುರ: ರಾಜ್ಯದಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವ ಹಿನ್ನೆಲೆ ಎರಡು ದಿನಗಳ ಹಿಂದೇ ವಿಜಯಪುರಕ್ಕೆ ಡಿಜಿ ಐಜಿಪಿ ಪ್ರವೀಣ್ ಸೂದ್ ಭೇಟಿ ಬಳಿಕ ನಿಡಗುಂದಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 87 ಕೆಜಿ ಹಸಿ ಗಾಂಜಾವನ್ನ ವಶಕ್ಕೆ ಪಡೆದು ಇಬ್ಬರನ್ನ ಬಂಧನ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಜಮೀನಿನಲ್ಲಿ ಮೆಕ್ಕೆಜೋಳದ ಮಧ್ಯದಲ್ಲಿ ಗಾಂಜಾ ಬೆಳೆಸಿದ್ದ ಗ್ರಾಮದ ನಿವಾಸಿ ಆರೋಪಿ ರವಿ ವಾಲೀಕಾರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಈ ಕುರಿತು ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಅಲ್ಲದೇ, ಮತ್ತೊಂದೆಡೆ ವಿಜಯಪುರ ನಗರದ ಜಮಖಂಡಿ ನಾಕಾ ಬಳಿಯ ಜಮೀನಿನಲ್ಲಿ ಬೆಳೆದ 15 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಆರೋಪಿ ಕಾಂತು ನಾಯಕ್ ನ್ನು ಬಂಧಿಸಲಾಗಿದೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಈ ಎರಡು ಪ್ರಕರಣಗಳಿಂದ ಪೊಲೀಸರು ಸಾಕಷ್ಟು ಕಂಗಾಲಾಗಿದ್ದು, ಕೆಲವರು ರೈತರಂತೆ ಇದನ್ನೇ ವ್ಯವಸಾಯ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಕಬ್ಬು ಮತ್ತು ಗೋವಿನಜೋಳದಲ್ಲಿ ಕಾಣದಂತೆ ಮಾಡಿರುವ ಪ್ರಕರಣಗಳನ್ನೇ ಪತ್ತೆ ಹಚ್ಚಿರುವುದರಿಂದ ಇನ್ನೂ ಗಾಂಜಾವನ್ನ ಹೊಲಗಳಲ್ಲಿ ಹುಡುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.