‘ಜಬರಿ’ ಮಾಡಿದ ‘ಬಂಗಾರಿ’- ಕೈಕೊಳ ಹಾಕಿದ “ವಿದ್ಯಾಗಿರಿ”…!

ಧಾರವಾಡ: ಡ್ರಾಪ್ ಕೊಡುವ ನೆಪದಲ್ಲಿ ವೃದ್ಧನೋರ್ವರನ್ನ ಬೈಕಿನಲ್ಲಿ ಹತ್ತಿಸಿಕೊಂಡು ಹೋಗಿ ಬೆದರಿಸಿ ಹಣ ದೋಚಿದ ಆರೋಪಿಯನ್ನ ಬಂಧನ ಮಾಡುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಪರಮೇಶ್ವರ ಶಂಕರನಾರಾಯಣ ಅವರ್ಸಾ ಎಂಬುವವರು ಕಲಘಟಗಿ ರಸ್ತೆಯ ವಿಜಯ ಬ್ಯಾಂಕ್ ಹತ್ತಿರ ನಿಂತಾಗ, ಕರೆದುಕೊಂಡು ಹೋಗಿ ಹಣವನ್ನ ದೋಚಿದ್ದ ಧಾರವಾಡದ ತಡಸಿನಕೊಪ್ಪ ಗೌಡ್ರ ಓಣಿಯ ಗೋವಿಂದ ಭೀಮಪ್ಪ ಬಂಗಾರಿ ಎಂಬ ಆರೋಪಿಯನ್ನ ಬಂಧನ ಮಾಡಲಾಗಿದೆ.
ಬಂಧಿತ ಆರೋಪಿಯಿಂದ ಕಪ್ಪು ಬಣ್ಣದ ಹಿರೋ ಹೊಂಡಾ ಬೈಕ್ ಹಾಗೂ 3500 ರೂಪಾಯಿ ನಗದನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿ ವೃದ್ಧನಿಂದ 5 ಸಾವಿರ ರೂಪಾಯಿಯನ್ನ ಯರಿಕೊಪ್ಪದ ಬ್ರಿಡ್ಜ್ ಹತ್ತಿರ ದೋಚಿದ್ದ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ, ಪಿಎಸ್ಐ ಸಚಿನಕುಮಾರ ದಾಸರೆಡ್ಡಿ, ಎಸ್.ಆರ್.ತೇಗೂರ, ಪ್ರೋಬೆಷನರಿ ಪಿಎಸ್ಐ ದೇವೆಂದ್ರ ವೈ.ಎಂ, ಎಎಸ್ಐ ಬಿ.ಎಂ.ಅಂಗಡಿ, ಸಿಬ್ಬಂದಿಗಳಾದ ಎಂ.ಎಫ್.ನದಾಫ, ಐ.ಪಿ.ಬುರ್ಜಿ, ಆರ್.ಕೆ.ಅತ್ತಾರ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ್, ಎಂ.ಜಿ.ಪಾಟೀಲ, ಎಂ.ವೈ.ಮಾದರ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.